ಮಂಗಳೂರು, ಫೆ. 23 (DaijiworldNews/SM): ಸಾರ್ವಜನಿಕರಿಂದ ಲಂಚ ಪಡೆಯುತ್ತಿದ್ದ ಸಹಾಯಕ ಭೂ ನಿರ್ದೇಶಕರ(ಎಡಿಎಲ್ಆರ್) ಕಚೇರಿಯಿಂದ ಎರಡನೇ ವಿಭಾಗದ ಅಧಿಕಾರಿಯನ್ನು ಫೆಬ್ರವರಿ 23ರ ಮಂಗಳವಾರದಂದು ಭ್ರಷ್ಟಾಚಾರ ನಿಗ್ರಹ ದಳದ ಬಂಧಿಸಿದ್ದಾರೆ.

ಬಂಧಿತ ಅಧಿಕಾರಿಯನ್ನು ಗಂಗಾಧರ್(51) ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ, ಮರಗಳನ್ನು ಕಡಿಯಲು ಸಮೀಕ್ಷೆ ಸ್ಕೆಚ್ ತಯಾರಿಸಲು ಗಂಗಾಧರ್ 16,500 ರೂಪಾಯಿಗಳನ್ನು ಸ್ವೀಕರಿಸುವಾಗ ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಎಸಿಬಿ ಅಧಿಕಾರಿಗಳು ಗಂಗಾಧರನನ್ನು ಬಂಧಿಸಿದ್ದಾರೆ. ಲಂಚದ ಮೊತ್ತವನ್ನು ಯಶಸ್ವಿಯಾಗಿ ವಶಪಡಿಸಿಕೊಂಡಿದ್ದಾರೆ.
ಎಸ್ಪಿ ಬೊಪ್ಪಯ್ಯ, ಡಿವೈಎಸ್ಪಿ ಪ್ರಕಾಶ್ ಕೆಸಿ, ಇನ್ಸ್ಪೆಕ್ಟರ್ಗಳಾದ ಶ್ಯಾಮ್ ಸುಂದರ್ ಎಚ್ಎಂ ಮತ್ತು ಗುರುರಾಜ್ ಮತ್ತು ಇತರ ಸಿಬ್ಬಂದಿಗಳ ಮಾರ್ಗದರ್ಶನದಲ್ಲಿ ಈ ದಾಳಿ ನಡೆಸಲಾಗಿದೆ.