ಬೆಳ್ತಂಗಡಿ, ಜು ೧೬: ಕಾಡಿನಿಂದ ನಾಡಿಗೆ ಬಂದ ಕಾಳಿಂಗ ಹಾವೊಂದನ್ನು ಹಿಡಿದು ಮರಳಿ ಕಾಡಿಗೆ ಬಿಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದಲ್ಲಿ ನಡೆದಿದೆ. ಇಲ್ಲಿನ ನಿವಾಸಿಯೋರ್ವರ ಮನೆ ಅಂಗಳದಲ್ಲಿ ಕಾಳಿಂಗ ಪ್ರತ್ಯಕ್ಷವಾಗಿದೆ.
ಸುಮಾರು ೧೦ ಅಡಿ ಉದ್ದದ ಕಾಳಿಂಗ ಸರ್ಪವನ್ನು ಕಂಡ ಮನೆ ಮಂದಿ ಆತಂಕಗೊಂಡಿದ್ದಾರೆ. ತಕ್ಷಣ ಉರಗ ತಜ್ಞ ಲಾಯಿಲದ ಸ್ನೇಕ್ ಆಶೋಕ್ ಪೂಜಾರಿಯವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಅವರು ಸ್ಥಳಕ್ಕೆ ತೆರಳಿ ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಚಾರ್ಮಾಡಿ ಘಾಟ್ ನ ಕಾಡು ಪ್ರದೇಶಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ. ಇದರಿಂದಾಗಿ ಮನೆ ಮಂದಿಗೆ ಉಂಟಾಗಿದ್ದ ಆತಂಕ ದೂರವಾದಂತಾಗಿದೆ.