ಮಂಗಳೂರು, ಫೆ. 24 (DaijiworldNews/SM): ಗಡಿಯಲ್ಲಿ ಕೋವಿಡ್ ಪರೀಕ್ಷೆಯಿಂದ ತಾತ್ಕಾಲಿಕ ವಿನಾಯಿತಿ ನೀಡಿ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರು ದೈಜಿವರ್ಲ್ಡ್ ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಆ ಮೂಲಕ ಕಳೆದ ಮೂರು ದಿನಗಳಿಂದ ದೈಜಿವರ್ಲ್ಡ್ ಪ್ರಸಾರ ಮಾಡಿದ ವರದಿಗಳು ಫಲಶ್ರುತಿ ಕಂಡಿದೆ. ಗಡಿನಾಡಿನ ಜನರ ಸಮಸ್ಯೆಯನ್ನು ಎತ್ತಿ ಹಿಡಿದಿದ್ದ ದೈಜಿವರ್ಲ್ಡ್ ನಿರಂತರ ಸುದ್ದಿ ಪ್ರಸಾರ ಮಾಡುವ ಮೂಲಕ ಗಡಿಜನನರ ಧ್ವನಿಯಾಗಿತ್ತು. ಜಿಲ್ಲಾಧಿಕಾರಿಗಳು, ಉಸ್ತುವಾರಿ ಸಚಿವರು, ಶಾಸಕರರೊಂದಿಗೆ ಮಾತುಕತೆ ನಡೆಸಿ ಗಡಿ ಭಾಗದ ಜನರ ಸಮಸ್ಯೆ ಬಗ್ಗೆ ಮನವರಿಕೆ ಮಾಡಲಾಗಿತ್ತು.
ನಿರಂತರ ಸುದ್ದಿ ಬಿತ್ತರಿಸಿದ ಬಳಿಕ ವರದಿಗೆ ಸ್ಪಂಧಿಸಿದ ಜಿಲ್ಲಾಧಿಕಾರಿಗಳು, ನಿತ್ಯ ಸಂಚರಿಸುವವರಿಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಕೆಲಸಕ್ಕೆ ತೆರಳುವವರಿಗೆ ಅವರ ಸ್ಥಳಗಳಲ್ಲಿ ಕೋವಿಡ್ ಪರೀಕ್ಷೆಗೆ ವ್ಯವಸ್ಥೆ ಮಾಡಿಕೊಡಲಾಗುವುದೆಂದು ತಿಳಿಸಿದ್ದಾರೆ. ಇದರಿಂದಾಗಿ ಪರೀಕ್ಷೆ ನಡೆಸುವವರಿಗೆ ಸಹಕಾರಿಯಾಗಲಿದೆ. ಇಷ್ಟಾಗಿಯೂ ಪರೀಕ್ಷೆ ನಡೆಸದೇ ಇದ್ದಲ್ಲಿ ಅಂತಹವರ ಸಂಚಾರಕ್ಕೆ ನಿರ್ಬಂಧವಿದೆ ಎಂದಿದ್ದಾರೆ.
ಅಲ್ಲದೆ, ಈ ವ್ಯವಸ್ಥೆ ಪರಿಪೂರ್ಣವಾಗಿ ಜಾರಿಗೊಂಡ ಬಳಿಕ ನಿಯಮವನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ. ಸದ್ಯ ಕೋವಿಡ್ ನೆಗೆಟಿವ್ ಕಡ್ಡಾಯದಿಂದ ವಿನಾಯಿತಿ ನೀಡಲಾಗಿದೆ ಎಂದು ದೈಜಿವರ್ಲ್ಡ್ ಗೆ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಮಾಹಿತಿ ನೀಡಿದ್ದಾರೆ.