ಉಡುಪಿ,ಜು 17: ಶ್ರೀ ಕೃಷ್ಣ ಮಠದಲ್ಲಿ ಪೂಜೆಗಾಗಿ ಇಟ್ಟಿರುವ ಪಟ್ಟದ ದೇವರನ್ನು ಕೊಡಲು ಮಠಾಧೀಶರು ನಿರಾಕರಿಸುತ್ತಿರುವ ದರೋಡೆಗೆ ಸಮ. ಶ್ರೀ ಕೃಷ್ಣ ನನ್ನ ಆಸ್ತಿಯಲ್ಲ, ರಾಮ ದೇವರು ಕೂಡಾ ನನ್ನ ಆಸ್ತಿಯಲ್ಲ ಆದರೆ ವಿಠಲ ಮಾತ್ರ ನನ್ನ ಸೊತ್ತು. ಪಟ್ಟದ ದೇವರಿಗಾಗಿ ಕ್ರಿಮಿನಲ್ ಕೇಸು ದಾಖಲಿಸಲು ಸಿದ್ದನೆಂದು ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.
ಹಿರಿಯಡ್ಕ ಸಮೀಪದ ಶಿರೂರು ಮಠಕ್ಕೆ ಸಂಬಂದಪಟ್ಟ ಜಾಗದಲ್ಲಿ 10 ಸಾವಿರ ಗಿಡ ನೆಡುವ ಯೋಜನೆಗೆ ಸೋಮವಾರ ಚಾಲನೆ ನೀಡಿ ಮಾಧ್ಯಮಗಳಿಗೆ ಮಾತನಾಡಿದರು. ಪರವೂರಿಗೆ ಹೋಗುವ ಸಂದರ್ಭ ಬೆಲೆಬಾಳುವ ವಸ್ತುಗಳನ್ನು ನಂಬಿಕಸ್ಥರಲ್ಲಿ ಕೊಡುವ ರೂಢಿ. ಆದರೆ ಅದನ್ನು ವಾಪಾಸು ನೀಡಲು ಹಿಂದೇಟು ಹಾಕುವುದು ದರೋಡೆಯೇ ರೀತಿಯೇ ಸರಿ. ಹಾಗೆಯೇ ನನ್ನ ಪಟ್ಟದ ದೇವರನ್ನು ಕೊಡಲು ಮಠಾಧೀಶರು ನಿರಾಕರಿಸುತ್ತಿರುವುದು ಇದಕ್ಕೆ ಸಮನಾಗಿದೆ. ಒಂದು ವೇಳೆ ಅಗತ್ಯ ಬಿದ್ದರೆ ಕ್ರಿಮಿನಲ್ ಕೇಸ್ ಹಾಕಲು ಸಿದ್ದ ಎಂದರು. ಪಟ್ಟದ ದೇವರಿಗಾಗಿ ನಾನು ಅಲ್ಲಿ ಹೋಗೋದಿಲ್ಲ, ಶ್ರೀ ಕೃಷ್ಣ ಮುಖ್ಯಪ್ರಾಣ ನನ್ನ ಪಟ್ಟದ ದೇವರನ್ನು ಪುನಃ ಹೇಗೆ ಮೂಲ ಮಠಕ್ಕೆ ಕರೆಸಿಕೊಳ್ಳುತ್ತಾರೆ ನೋಡಿ ಎಂದು ಹೇಳಿದರು .