ಉಡುಪಿ, ಫೆ. 25 (DaijiworldNews/HR): ಕಳೆದ ಒಂದು ವರ್ಷದಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಮತ್ತು ರಾಜ್ಯ ಮಹಿಳಾ ನಿಲಯ ನಿಟ್ಟೂರು ಪುತ್ತೂರು ಗ್ರಾಮ ಎಂಬ ಸಂಸ್ಥೆಯಲ್ಲಿ ವಾಸಿಸುತ್ತಿರುವ ಕಿರಣ್ (30) ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.

ಫೆಬ್ರವರಿ 24 ರಂದು ಬೆಳಿಗ್ಗೆ 9 ಗಂಟೆಗೆ ಬಟ್ಟೆಗಳನ್ನು ಒಣ ಹಾಕಲು ಇತರರೊಂದಿಗೆ ಹೊರ ಹೋದವರು ವಾಪಾಸು ಬಾರದೇ ಸಂಸ್ದೆಯಿಂದ ತಪ್ಪಿಸಿಕೊಂಡು ಕಾಣೆಯಾಗಿದ್ದಾರೆಂದು ತಿಳಿದು ಬಂದಿದೆ.
ಪೊಲೀಸ್ ಠಾಣೆಯಲ್ಲಿ ಸರಣಿ ಸಂಖ್ಯೆ 27/2021 ಅಡಿಯಲ್ಲಿ ದೂರು ದಾಖಲಿಸಲಾಗಿದೆ.