ಮಂಗಳೂರು, ಫೆ. 25 (DaijiworldNews/HR): ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಪೆನ್ನು, ಬ್ಯಾಟರಿ ಮತ್ತು ಪೇಸ್ಟ್ ರೂಪದಲ್ಲಿ ಸಾಗಿಸುತ್ತಿದ್ದ 61.02 ಲಕ್ಷ ಮೌಲ್ಯದ ಒಂದು ಕಿಲೋ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ನಡೆದಿದೆ.

ಮೊದಲ ಘಟನೆಯಲ್ಲಿ ಫೆಬ್ರವರಿ 23 ರಂದು ಮೂರು ಪ್ಯಾಕೆಟ್ ಚಿನ್ನವನ್ನು ಪುಡಿ ರೂಪದಲ್ಲಿ ಒಟ್ಟು 825 ಗ್ರಾಂ ಮತ್ತು 30,75,160 ರೂ.ಗಳ ನಿವ್ವಳ ತೂಕ 638 ಗ್ರಾಂ ಚಿನ್ನವನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ್ದ ಕಾಸರಗೋಡಿನ ಪೈವಳಿಕೆ ಮೂಲದ ಅಬ್ದುಲ್ ರಶೀದ್ ಅವರನ್ನು ಬಂಧಿಸಲಾಗಿದ್ದು, ಆರೋಪಿಯನ್ನು 14 ದಿನಗಳ ಕಸ್ಟಡಿಗೆ ವಿಧಿಸಲಾಗಿದೆ.
ಇನ್ನು ದುಬೈನಿಂದ ಆಗಮಿಸಿದ ಕಾಸರಗೋಡು ಮೂಲದ ಮತ್ತೊಬ್ಬ ಪ್ರಯಾಣಿಕ ಅಬ್ದುಲ್ ನಿಸ್ಸಾದ್ ಪೆನ್ನುಗಳ ಒಳಗೆ ಅಡಗಿಸಿಟ್ಟಿದ್ದ ಚಿನ್ನ ಮತ್ತು ತುರ್ತು ಬೆಳಕಿನ ಬ್ಯಾಟರಿಯ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.