ಕಾಸರಗೋಡು, ಜು 17 : ನಕಲಿ ನಂಬರ್ ಪ್ಲೇಟ್ ಗಳನ್ನು ಅಳವಡಿಸಿದ್ದ ಎರಡು ಬುಲೆಟ್ ಬೈಕ್ ಗಳನ್ನು ಕಾಸರಗೋಡು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು , ಸವಾರ ಪರಾರಿಯಾಗಿದ್ದಾನೆ. ಬುಲೆಟ್ ಬೈಕ್ ಗಳನ್ನು ಬಂಟ್ವಾಳ ದಿಂದ ಕಳವುಗೈದುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಕಾಸರಗೋಡು ನಗರ ಠಾಣಾ ಸರ್ಕಲ್ ಇನ್ಸ್ ಪೆಕ್ಟರ್ ಅಬ್ದುಲ್ ರಹೀಮ್ ನೇತೃತ್ವದ ತಂಡವು ಕಾಸರಗೋಡು ರೈಲ್ವೆ ನಿಲ್ದಾಣ ಪರಿಸರದಲ್ಲಿ ತಪಾಸಣೆ ನಡೆಸುತ್ತಿದ್ದಾಗ ಆ ದಾರಿಯಾಗಿ ಬಂದ ಸವಾರರು ಪೊಲೀಸರನ್ನು ಕಂಡಾಗ ಬುಲೆಟ್ ಬೈಕ್ ಗಳನ್ನು ಬಿಟ್ಟು ಪರಾರಿಯಾಗಿದ್ದಾನೆ. ಬೈಕನ್ನು ವಶಕ್ಕೆ ತೆಗೆದು ಪರಿಶೀಲಿಸಿ ಮಾಲಕನಿಗೆ ಕರೆ ಮಾಡಿದಾಗ ಬುಲೆಟ್ ಮನೆಯಲ್ಲಿರುವುದಾಗಿ ತಿಳಿಸಿದ್ದು , ಬೈಕನ್ನು ಠಾಣೆ ಗೆ ತರುವಂತೆ ಮಾಲಕನಿಗೆ ಪೊಲೀಸರು ಸೂಚಿಸಿದ್ದಾರೆ. ಬಳಿಕ ಪರಿಶೀಲಿಸಿದಾಗ ವಶ ಪಡಿಸಿಕೊಂಡ ಬೈಕ್ ಗಳ ನಂಬರ್ ನಕಲಿ ಎಂದು ತಿಳಿದು ಬಂದಿದೆ. ಬಳಿಕ ಪೊಲೀಸರು ವಶಕ್ಕೆ ತೆಗೆದುಕೊಂಡ ಬೈಕ್ ಗಳ ಇಂಜಿನ್ ನಂಬರ್ ಸಹಿತ ಪರಿಶೀಲನೆ ನಡೆಸಿದಾಗ ಈ ಬುಲೆಟ್ ಗಳು ಬಂಟ್ವಾಳ ದಿಂದ ಕಳವು ಗೈದುದಾಗಿ ತಿಳಿದುಬಂದಿದೆ.
ಕಾಸರಗೋಡು ಪೊಲೀಸರು ಈ ಬಗ್ಗೆ ತನಿಖೆ ಚುರುಕುಗೊಳಿಸಿದ್ದು , ಬಂಟ್ವಾಳ ಪೊಲೀಸರ ನ್ನು ಸಂಪರ್ಕಿಸಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ. ಹೊರ ರಾಜ್ಯದಿಂದ ಬೈಕ್ ಗಳನ್ನು ನಕಲಿ ನಂಬರ್ ಪ್ಲೇಟ್ ಅಳವಡಿಸಿ ಮಾರಾಟ ಮಾಡುವ ಜಾಲ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದ್ದು , ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ.
ಪರಾರಿಯಾದ ಆರೋಪಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.