ಕಾಸರಗೋಡು, ಫೆ. 25 (DaijiworldNews/HR): ವಿಧಾನಸಭಾ ಚುನಾವಣಾ ಪೂರ್ವಭಾವಿಯಾಗಿ ಹೊಸ ಮತದಾರರಿಗೆ ಜಾಗೃತಿ ಕಾರ್ಯಕ್ರಮ ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ಡಿ ಸಜಿತ್ ಬಾಬು ಉದ್ಘಾಟಿಸಿದ್ದು, ಜೊತೆಗೆ ಮತದಾತರನ್ನು ಆಕರ್ಪಿಸುವ ನಿಟ್ಟಿನಲ್ಲಿ ಸಿಗ್ನೀಚರ್ ಶಿಬಿರ, ಸೆಲ್ಪಿ ಕಾರ್ನರ್ಗಳ ಉದ್ಘಾಟನೆ, ಮೈ ವೋಟ್ ಮೈ ಪ್ರೈಡ್ ಎಂಬ ಹಾಷ್ ಟಾಗ್ನ ಬಿಡುಗಡೆ ಜರುಗಿತು.
ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ಸೈಮನ್ ಫೆರ್ನಾಂಡಿಸ್ , ಐ.ಸಿ.ಡಿ.ಎಸ್. ಜಿಲ್ಲಾ ಸಂಚಾಲಕಿ ಕವಿತಾರಾಣಿ ರಂಜಿತ್ ಉಪಸ್ಥಿತರಿದ್ದರು.