ಕಾಸರಗೋಡು, ಫೆ.26 (DaijiworldNews/HR): ಚೆನೈ-ಮಂಗಳೂರು ಸೂಪರ್ ಪಾಸ್ಟ್ ರೈಲಿನಿಂದ ಸ್ಪೋಟಕ ವಸ್ತುಗಳನ್ನು ಕೋಜಿಕ್ಕೋಡ್ನಲ್ಲಿ ವಶಪಡಿಸಿಕೊಳ್ಳಲಾಗಿದೆ.

ಸಾಂಧರ್ಭಿಕ ಚಿತ್ರ
ರೈಲು ಕೋಜಿಕ್ಕೋಡ್ ನಿಲ್ದಾಣಕ್ಕೆ ತಲಪಿದಾಗ ಶೋಧ ನಡೆಸಿದ್ದು, ಸೀಟಿನಡಿಯಲ್ಲಿ ಪೆಟ್ಟಿಗೆಗಳಲ್ಲಿ ಈ ವಸ್ತುಗಳು ಪತ್ತೆಯಾಗಿವೆ. ಈ ಸೀಟಿನಲ್ಲಿದ್ದ ಚೆನ್ನೈ ಮೂಲದ ಮಹಿಳೆಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
117 ಜಿಲೆಟಿನ್ ಸ್ಟಿಕ್, 350ಡಿಟರ್ನೇಟರ್ಗಳನ್ನು ವಶಕ್ಕೆತೆಗೆದುಕೊಳ್ಳಲಾಗಿದ್ದು, ವಶಪಡಿಸಿಕೊಂಡ ಸ್ಪೋಟಕ ವಸ್ತುಗಳಿಗೆ ಹಾಗೂ ವಶಕ್ಕೆ ತೆಗೆದುಕೊಂಡಿರುವ ಮಹಿಳೆಗೆ ಸಂಬಂಧ ಇದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಮಹಿಳೆ ಚೆನ್ನೈ ಯಿಂದ ಕಣ್ಣೂರಿನ ತಲಶ್ಯೇರಿಗೆ ಬರುತ್ತಿದ್ದರು ಎನ್ನಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.