ಉಡುಪಿ, ಫೆ.26 (DaijiworldNews/HR): ಬಸವರಾಜು ಎಂಬವರು ಉಡುಪಿ ಅಜ್ಜರಕಾಡಿನ ಭುಜಂಗ ಪಾರ್ಕ್ ಬಳಿ ಇರುವ ಪಾರ್ಕಿಂಗ್ ಸ್ಥ ಳದಲ್ಲಿ ತನ್ನ ಬೈಕ್ ನಿಲ್ಲಿಸಿ ಹೋಗಿದ್ದು ಬರುವಾಗ ಬೈಕ್ ಕಳವಾದ ಘಟನೆ ನಡೆದಿದೆ.

ಸಾಂಧರ್ಭಿಕ ಚಿತ್ರ
ಉಡುಪಿ ಅಜ್ಜರಕಾಡಿನ ಭುಜಂಗ ಪಾರ್ಕ್ ಬಳಿ ಇರುವ ರಿಕ್ಷಾ ನಿಲ್ದಾಣದ ಎದುರು ಇರುವ ಪಾರ್ಕಿಂಗ್ ಸ್ಥಳದಲ್ಲಿ ಬೈಕನ್ನು ಹ್ಯಾಂಡ್ ಲಾಕ್ ಮಾಡದೇ ಬೈಕಿನಲ್ಲಿಯೇ ಕೀ ಇಟ್ಟು ಪಾರ್ಕ್ನೊಳಗೆ ಮೊಬೈಲ್ನಲ್ಲಿ ಮಾತನಾಡಿಕೊಂಡು ಹೋಗಿ ಸ್ವಲ್ಪ ಸಮಯ ಪಾರ್ಕ್ನಲ್ಲಿ ಕುಳಿತುಕೊಂಡು ಮಧ್ಯಾಹ್ನ 12:45 ಗಂಟೆಗೆ ಹಿಂದಿರುಗಿ ಬೈಕ್ ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡಿದಾಗ ಬಸವರಾಜು ಅವರು ನಿಲ್ಲಿಸಿದ ಬೈಕ್ ಯಾರೋ ಕಳವು ಮಾಡಿಕೊಂಡು ಹೋಗಿರುವುದಾಗಿದೆ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.