ಮಂಗಳೂರು, ಫೆ.26 (DaijiworldNews/HR): ಸರ್ಕಾರದ ನಿರ್ಲಕ್ಷ್ಯದಿಂದಾಗಿ, ಬಡ ಜನರಿಗೆ ಕಡಿಮೆ ವೆಚ್ಚದಲ್ಲಿ ಆಹಾರವನ್ನು ಒದಗಿಸುವ ಮಹತ್ವಾಕಾಂಕ್ಷೆಯೊಂದಿಗೆ ಪ್ರಾರಂಭವಾದ ಇಂದಿರಾ ಕ್ಯಾಂಟೀನ್ಗಳು ಕಷ್ಟದ ಸಮಯಗಳನ್ನು ಎದುರಿಸುತ್ತಿದ್ದ್ದು, ಪುತ್ತೂರು, ಸುಳ್ಯ ಮತ್ತು ಬಂಟ್ವಾಳದಲ್ಲಿರುವ ಇಂದಿರಾ ಕ್ಯಾಂಟೀನ್ಗಳು ಕಳೆದ ಆರು ದಿನಗಳಿಂದ ಮುಚ್ಚಲ್ಪಟ್ಟಿವೆ.

ಈ ಕ್ಯಾಂಟೀನ್ಗಳನ್ನು ಸಿದ್ದರಾಮಯ್ಯ ಸರ್ಕಾರವು ಪ್ರಾರಂಭಿಸಿದ್ದು, ಈಗ ಸರ್ಕಾರದ ನಿರ್ಲಕ್ಷ್ಯದಿಂದಾಗಿ, ಕಳೆದ ನಾಲ್ಕು ತಿಂಗಳುಗಳಿಂದ ಕ್ಯಾಂಟೀನ್ಗಳ ಸಿಬ್ಬಂದಿಗೆ ಯಾವುದೇ ಸಂಬಳ ನೀಡಲಾಗಿಲ್ಲ, ಆದ್ದರಿಂದ, ಮೇಲಿನ ಮೂರು ಕ್ಯಾಂಟೀನ್ಗಳನ್ನು ಮುಚ್ಚಲಾಗಿದೆ.
ಈ ಮೂರು ಕ್ಯಾಂಟೀನ್ಗಳಲ್ಲಿ ತಲಾ ಏಳು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅಕ್ಟೋಬರ್ ನಂತರ ಯಾವುದೇ ಕಾರ್ಮಿಕರಿಗೆ ವೇತನ ಸಿಗಲಿಲ್ಲ ಎಂದು ತಿಳಿದುಬಂದಿದೆ. ತಮ್ಮ ಸಂಬಳಕ್ಕಾಗಿ ಕಾಯುತ್ತಿದ್ದರಿಂದ ಬೇಸರಗೊಂಡ ಸಿಬ್ಬಂದಿ, ಶನಿವಾರದಿಂದ ಕ್ಯಾಂಟೀನ್ಗಳನ್ನು ಮುಚ್ಚಿ ಮನೆಗೆ ತೆರಳಿದ್ದಾರೆ.
ರಾಜ್ಯದಲ್ಲಿ 130 ಕ್ಯಾಂಟೀನ್ಗಳನ್ನು ನಡೆಸುತ್ತಿರುವ ಭಾರತೀಯ ಮಾನವ ಕಲ್ಯಾಣ ಮಂಡಳಿ, ಕಳೆದ 11 ತಿಂಗಳಿಂದ ಜಿಲ್ಲಾಡಳಿತಗಳು ತಮ್ಮಿಂದಾಗಿ ಹಣವನ್ನು ವಿತರಿಸಿಲ್ಲ ಎಂದು ಹೇಳಿದೆ.
ಬಂಟ್ವಾಳದಲ್ಲಿರುವ ಇಂದಿರಾ ಕ್ಯಾಂಟೀನ್ಗಳು ಕಳೆದ 18 ತಿಂಗಳುಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಸುಳ್ಯದಲ್ಲಿ ಒಂದು ವರ್ಷ ಹಳೆಯದಾಗಿದೆ.
ಇಂದಿರಾ ಕ್ಯಾಂಟೀನ್ ವ್ಯವಸ್ಥಾಪಕ ಮಜೀದ್ ಆರ್ಲಪದವು ಮಾತನಾಡಿ, "ಅಕ್ಟೋಬರ್ ನಂತರ ಸಿಬ್ಬಂದಿಗೆ ವೇತನ ದೊರೆತಿಲ್ಲ ಆದಕಾರಣ ಕ್ಯಾಂಟೀನ್ಗಳನ್ನು ಕಾರ್ಯರೂಪಕ್ಕೆ ತರಲು ಬೇರೆ ದಾರಿಯಿಲ್ಲದೆ ಅವುಗಳನ್ನು ಮುಚ್ಚಲಾಗಿದೆ" ಎಂದರು.
ಇನ್ನು ಕ್ಯಾಂಟೀನ್ಗಳನ್ನು ನಿರ್ವಹಿಸುವ ಭಾರತೀಯ ಮಾನವ ಕಲ್ಯಾಣ ಮಂಡಳಿಯ ಆಡಳಿತ ವಿಭಾಗಕ್ಕೆ ಸೇರಿದ ಶಶಿಕುಮಾರ್ ಮಾತನಾಡಿ, ಸರ್ಕಾರವು ಅವರಿಗೆ 21 ಕೋಟಿ ರೂ. ಪಾವತಿಸಬೇಕಿದೆ ಮತ್ತು ಪ್ರತಿ ತಿಂಗಳು 95 ಲಕ್ಷ ರೂ.ಗಳನ್ನು ಸಿಬ್ಬಂದಿ ವೇತನಕ್ಕಾಗಿ ಖರ್ಚು ಮಾಡಲಾಗುತ್ತಿದೆ" ಎಂದು ಹೇಳಿದ್ದಾರೆ.