ಉಳ್ಳಾಲ, ಫೆ. 26 (DaijiworldNews/SM): ವ್ಯಕ್ತಿಯೊಬ್ಬರ ಮೇಲೆ ಐದು ಮಂದಿಯ ತಂಡವೊಂದು ಹಲ್ಲೆ ನಡೆಸಿರುವ ಘಟನೆ ನಗರದಲ್ಲಿ ನಡೆದಿದೆ. ಬಾರ್ ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಶಿವರಾಮ್(36) ಗಾಯಗೊಂಡ ವ್ಯಕ್ತಿ.

ಶಿವರಾಮ್ ಈ ಹಿಂದೆ ಬಸ್ ವೊಂದರಲ್ಲಿ ಉದ್ಯೋಗಿಯಾಗಿದ್ದರು. ಇನ್ನು ಹಲ್ಲೆ ನಡೆಸಿದವರು ಕುಂಜತ್ತಬೈಲು ಮೂಲದವರು ಎಂದು ಗುರುತಿಸಲಾಗಿದೆ. ಇನ್ನು ಹಳೆಯ ದ್ವೇಷವೇ ಹಲ್ಲೆಗೆ ಕಾರಣ ಎಂದು ಹೇಳಲಾಗಿದೆ.
ಉಳ್ಳಾಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.