ಮಂಜೇಶ್ವರ, ಫೆ.27 (DaijiworldNews/HR): ರಾಜ್ಯ ಮೀನು ಕಾರ್ಮಿಕ ರ ಸಂಘಟನೆ (ಸಿಐಟಿಯು)ನೇತೃತ್ವದಲ್ಲಿ ವಾಹನ ಪ್ರಚಾರ ಜಾಥಾಕ್ಕೆ ಮಂಜೇಶ್ವರದ ಹೊಸಂಗಡಿಯಿಂದ ಪ್ರಯಾಣ ಬೆಳೆಸಲಾಯಿತು.


ಜಾಥಾವನ್ನು ಸಿಪಿಐಎಂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಆರ್ ಜಯಾನಂದ ಉದ್ಘಾಟಿಸಿದರು.
ಜಾಥಾದಲ್ಲಿ ಪಿ.ಪಿ ಚಿತ್ತರಂಜನ್, ಕೆ.ಸಿ ರಾಜೀವ್, ಕಾಟಾಡಿ ಕುಮಾರನ್ ಮೊದಲಾದವರು ಉಪಸ್ಥಿತರಿದ್ದರು.
ಜಾಥಾವು ಕಾಸರಗೋಡು, ಬೇಕಲ ಮೊದಲಾದೆಡೆಗಳಲ್ಲಿ ಸಂಚಾರ ನಡೆಸಿತು ಎನ್ನಲಾಗಿದೆ.