ಮಂಗಳೂರು, ಫೆ.27 (DaijiworldNews/PY): ವಿಶ್ವ ಕೊಂಕಣಿ ಕೇಂದ್ರ, ಶಕ್ತಿನಗರದಲ್ಲಿ ಫೆ.27ರಂದು ನಡೆದ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಐವರು ಸಾಧಕರಿಗೆ ಪ್ರತಿಷ್ಠಿತ ವಿಶ್ವ ಕೊಂಕಣಿ ಪ್ರಶಸ್ತಿ- 2020 ಅನ್ನು ಪ್ರದಾನ ಮಾಡಲಾಯಿತು.





































ವಿಮಲಾ ವಿ.ಪೈ ಕೊಂಕಣಿ ಸಾಹಿತ್ಯ ಪುರಸ್ಕಾರವನ್ನು ಕೆ.ಎಂ. ಸುಖತಂಕರ್ ಅವರ ಧುಮ್ಕ್ಯಾರ್ ಧುಮ್ಕೆ (ವಿಡಂಬನೆ)ಗೆ ನೀಡಲಾಯಿತು. ವಿಮಲಾ ವಿ.ಪೈ ಕೊಂಕಣಿ ಕವನ ಪ್ರಶಸ್ತಿಯನ್ನು ಶೈಲೇಂದ್ರಾ ಮೆಹ್ತಾ ಅವರ ಸಿಸಿಫಸ್ ಟೆಂಗ್ಶರ್ (ಕವನ)ಕ್ಕೆ ನೀಡಲಾಯಿತು.
ವಿಮಲಾ ವಿ ಪೈ ವಿಶ್ವ ಕೊಂಕಣಿ ಅವರ ಜೀವಮಾನ ಸಾಧನೆ ಪ್ರಶಸ್ತಿಯನ್ನು ಡಾ.ಶಿವರಾಮ್ ಕಾಮತ್ ಅವರಿಗೆ ಕೊಂಕಣಿ ಭಾಷಾ ಆಂದೋಲನಕ್ಕೆ ನೀಡಿದ ಜೀವಮಾನದ ಕೊಡುಗೆಯಾಗಿ ನೀಡಲಾಯಿತು.
ಬಸ್ತಿ ವಾಮನ ಶೆಣೈ, ಕೊಂಕಣಿ ಸೇವಾ ಪುರಸ್ಕಾರವನ್ನು ಮೀರಾ ಶೆಣೈ ಅವರು ವಿಕಲಚೇತನ ಸಬಲೀಕರಣಕ್ಕಾಗಿ ಸಲ್ಲಿಸಿದ ಸೇವೆಗೆ ಹಾಗೂ ಭಾರತೀಯ ಶಿಲಾಶಾಸನ ಹಾಗೂ ಇತಿಹಾಸ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಡಾ.ವೈ ಉಮಾನಾಥ್ ಶೆಣೈ ಅವರಿಗೆ ನೀಡಲಾಯಿತು.
ಐವರು ಸಾಧಕರಿಗೆ, ಖ್ಯಾತ ಕೊಂಕಣಿ ಕವಿ ಹಾಗೂ ಗೋವಾ ಕೊಂಕಣಿ ಅಕಾಡೆಮಿಯ ಅಧ್ಯಕ್ಷ ಅರುಣ್ ಸಖರ್ದಂಡೆ ಅವರು ವಿಶ್ವ ಕೊಂಕಣಿ ಪ್ರಶಸ್ತಿ ಪ್ರದಾನ ಮಾಡಿದರು.
ಈ ವೇಳೆ ಮಣಿಪಾಲ್ ಗ್ಲೋಬಲ್ ಎಜುಕೇಷನ್ ಸಂಸ್ಥೆಯ ಅಧ್ಯಕ್ಷ ಟಿ.ವಿ.ಮೋಹನ್ ದಾಸ್ ಪೈ ಅವರು ಜೂಮ್ ಮೀಟ್ ಮೂಲಕ ಮಾತನಾಡಿದರು.
ವಿಶ್ವಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ ಅವರು ಸ್ವಾಗತಿಸಿದರು, ಕಾರ್ಯಕ್ರಮವನ್ನು ಸ್ಮಿತಾ ಶೆಣೈ ಸಂಯೋಜಿಸಿದರು.
ಖಜಾಂಚಿ ಬಿ ಆರ್ ಭಟ್, ಪ್ರಧಾನ ಕಾರ್ಯದರ್ಶಿ ಜಿ ನಂದಗೋಪಾಲ್ ಶೆಣೈ, ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷ ಗಿಲ್ಬರ್ಟ್ ಡಿಸೋಜಾ ಮತ್ತು ಮತ್ತಿತರರು ಉಪಸ್ಥಿತರಿದ್ದರು.