ಕಾಸರಗೋಡು, ಫೆ.27 (DaijiworldNews/MB) : ಜಿಲ್ಲೆಯಲ್ಲಿ ಶನಿವಾರ 148 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

103 ಮಂದಿ ಗುಣಮುಖರಾಗಿದ್ದಾರೆ. 1,322 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ 1,023 ಮಂದಿ ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
6,605 ಮಂದಿ ನಿಗಾದಲ್ಲಿದ್ದಾರೆ. ಈವರೆಗೆ 29,175 ಮಂದಿಯಲ್ಲಿ ಕೊರೊನಾ ದೃಢಪಟ್ಟಿದ್ದು ಈ ಪೈಕಿ 27,568 ಮಂದಿ ಗುಣಮುಖರಾಗಿದ್ದಾರೆ.