ಉಡುಪಿ, ಫೆ.27 (DaijiworldNews/MB) : ಫೆಬ್ರವರಿ 27 ರ ಶನಿವಾರ ಪರಿಸರ, ಜೀವಶಾಸ್ತ್ರ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಪಿ. ಯೋಗೇಶ್ವರ ಅವರು ಎಂಡ್ ಪಾಯಿಂಟ್ ಹಾಗೂ ಕಾಪು ಬೀಚ್ನ ಸಮೀಪದಲ್ಲಿರುವ ಪಡುಬಿದ್ರೆಯ ಬ್ಲೂ ಫ್ಲಾಗ್ ಬೀಚ್ಗೆ ಭೇಟಿ ನೀಡಿದರು.








ಬಳಿಕ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಅವರು, ''ಕರ್ನಾಟಕವು ಕರಾವಳಿ ಕಡಲತೀರಗಳ ಎರಡು ಕಡೆಗಳಲ್ಲಿ ಬ್ಲೂ ಪ್ಲಾಗ್ ಮಾನ್ಯತೆ ಪಡೆದಿದೆ. ಪ್ರವಾಸೋದ್ಯಮ ಇಲಾಖೆ ಇದನ್ನು ಮುಖ್ಯ ಪ್ರವಾಸಿ ಕೇಂದ್ರವನ್ನಾಗಿ ಮಾಡಲು ಬಯಸಿದ್ದು ಅದು ಸರ್ಕಾರದ ಹೊಣೆಗಾರಿಕೆ. ಆ ದೃಷ್ಟಿಕೋನದಿಂದ ನಾವು ಪ್ರವಾಸಿಗರಿಗೆ ಮೂಲಸೌಕರ್ಯಗಳನ್ನು ಒದಗಿಸಬೇಕು. ಈ ಉದ್ಯಾನದಲ್ಲಿ ಜಲ ಕ್ರೀಡೆಗಳನ್ನು ಅಭಿವೃದ್ಧಿಪಡಿಸುವ ಪ್ರಸ್ತಾಪವಿದೆ'' ಎಂದು ಹೇಳಿದರು.
''ಪ್ರವಾಸೋದ್ಯಮ ಇಲಾಖೆಯು ಸರ್ಕಾರಿ ಭೂಮಿಯನ್ನು ಗುರುತಿಸಿ ನಮಗೆ ವರದಿಯನ್ನು ಸಲ್ಲಿಸಿದರೆ, ಯಾವುದೇ ಖಾಸಗಿ ಕಂಪನಿಗಳು ಜಲ ಕ್ರೀಡೆಗಳನ್ನು ಆರಂಭಿಸಲು ಮುಂದೆ ಬಂದರೆ ಅದನ್ನು ಗುತ್ತಿಗೆ ಆಧಾರದ ಮೇಲೆ ನೀಡಲಾಗುವುದು. ನಾವು ಖಂಡಿತವಾಗಿಯೂ ಅವರನ್ನು ಪ್ರೋತ್ಸಾಹಿಸುತ್ತೇವೆ'' ಎಂದು ತಿಳಿಸಿದರು.
''ಬೀಚ್ನ ರಸ್ತೆ ಅಗಲೀಕರಣ ಮಾಡಲು, ಎರಡು ಕಡೆ ಸೇತುವೆಗಳ ನಿರ್ಮಾಣಕ್ಕಾಗಿ ಒಟ್ಟು 10 ಕೋಟಿ ರೂ. ಯ ಪ್ರಸ್ತಾಪವನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ'' ಎಂದು ತಿಳಿಸಿದರು.
ಕಾಪು ಶಾಸಕ ಲಾಲಾಜಿ ಮೆಂಡನ್ ಅವರು ಪಡುಬಿದ್ರಿ ಬೀಚ್ ಮತ್ತು ಕಾಪು ಕಡಲತೀರಗಳ ಅವಶ್ಯಕತೆಯನ್ನು ವಿವರಿಸಿದರು. ''ಕರ್ನಾಟಕದಲ್ಲಿ ಪ್ರವಾಸೋದ್ಯಮ ಕೇರಳ ಮತ್ತು ಗೋವಾದಂತೆ ಅಭಿವೃದ್ಧಿ ಹೊಂದಿಲ್ಲ. ಈ ವಲಯವನ್ನು ಯಾರೂ ಉದ್ಯಮವಾಗಿ ತೆಗೆದುಕೊಳ್ಳುತ್ತಿಲ್ಲ. ಪ್ರವಾಸೋದ್ಯಮ ವಲಯವನ್ನಾಗಿ ಪರಿವರ್ತಿಸಲು ಯಾರಾದರೂ ಮುಂದಾದರೆ ಸರ್ಕಾರ ಅವರಿಗೆ ಸಹಾಯಧನವನ್ನು ನೀಡುತ್ತದೆ. ಈ ನಿಟ್ಟಿನಲ್ಲಿ ಕರಾವಳಿ ಕರ್ನಾಟಕಕ್ಕೆ ಸರ್ಕಾರ ವಿಶೇಷ ಒತ್ತು ನೀಡಲಿದೆ'' ಎಂದು ಭರವಸೆ ನೀಡಿದರು.
''ನಮ್ಮಲ್ಲಿ 320 ಕಿ.ಮೀ ಉದ್ದದ ಕರಾವಳಿ ಭಾಗ ಇರುವುದರಿಂದ ಸಾಗರಮಾಲಾ ಯೋಜನೆ ಕುರಿತು ಚರ್ಚಿಸಲು ನಾವು ಪ್ರಧಾನಿಯನ್ನು ಸಂಪರ್ಕಿಸುತ್ತಿದ್ದೇವೆ. ಈ ಪ್ರವಾಸೋದ್ಯಮಕ್ಕೆ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸಲು ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ'' ಎಂದು ಹೇಳಿದರು.
ಇನ್ನು ಉಡುಪಿಯ ಮರೀನಾ ಬೀಚ್ಗೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ''ಆ ವಿಷಯದ ಬಗ್ಗೆ ನನ್ನ ಬಳಿ ಮಾಹಿತಿ ಇಲ್ಲ'' ಎಂದು ಹೇಳುವ ಮೂಲಕ ಉತ್ತರಿಸಲು ನಿರಾಕರಿಸಿದರು.
''ಕೇರಳ ಮಾದರಿ ಸಿಆರ್ಝಡ್ ನಿಯಮಗಳು ಶೀಘ್ರದಲ್ಲೇ ಕರ್ನಾಟಕಕ್ಕೆ ಬರಲಿವೆ. ಅದರ ನಂತರ ನಾವು ಎಲ್ಲಿಯಾದರೂ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಬಹುದು. ಕರ್ನಾಟಕವು ಪ್ರವಾಸೋದ್ಯಮ ವ್ಯವಹಾರಕ್ಕೆ ಒಡ್ಡಿಕೊಳ್ಳುವುದಿಲ್ಲ. ರಾಜ್ಯ ಪ್ರವಾಸೋದ್ಯಮವು ಕರಾವಳಿ ಪ್ರದೇಶಕ್ಕೆ ಶಾಶ್ವತ ಹೆಲಿ ಟೂರಿಸಂ ಕಾರಿಡಾರ್ ಮಾಡುವ ಬಗ್ಗೆ ಯೋಚಿಸುತ್ತಿದೆ'' ಎಂದು ಸಚಿವ ಯೋಗೀಶ್ವರ್ ಹೇಳಿದರು.
ಜಿಲ್ಲಾಧಿಕಾರಿ ಜಿ.ಜಗದೀಶ್, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಸೋಮಶೇಖರ್, ಚಂದ್ರಶೇಖರ್ ಮತ್ತು ಇತರರು ಉಪಸ್ಥಿತರಿದ್ದರು.