ಮಂಗಳೂರು, ಫೆ.28 (DaijiworldNews/MB) : ಯುಗಯುಗದಿಂದಲೂ, ಉಡುಪಿ ಜಿಲ್ಲೆಯ ಬಾರ್ಕೂರಿನಿಂದ ಕಾಸರಗೋಡು ಜಿಲ್ಲೆಯ ಚಂದ್ರಗಿರಿ ನಡುವಿನ ಪ್ರದೇಶವನ್ನು ತುಳುನಾಡು ಎಂದು ಪರಿಗಣಿಸಲಾಗಿದೆ. ಇದು ವಿಶಿಷ್ಟ ಸಂಸ್ಕೃತಿ ಮತ್ತು ಪದ್ಧತಿಗಳನ್ನು ಹೊಂದಿದೆ. ತುಳುನಾಡನ್ನು ಪ್ರತ್ಯೇಕ ರಾಜ್ಯವಾಗಿ ರೂಪಿಸುವ ಬೇಡಿಕೆ ಬಹಳ ಹಿಂದಿನಿಂದಲೂ ಇದೆ. ಏತನ್ಮಧ್ಯೆ 'ತುಳುವೆರೆ ಪಕ್ಷ' ಕೇಂದ್ರ ಚುನಾವಣಾ ಆಯೋಗದಲ್ಲಿ ನೋಂದಾವಣೆಯಾಗಿದ್ದು ಈ ರಾಜಕೀಯ ಪಕ್ಷವು ತುಳು ಸಂಘಟನೆಗಳು ಎತ್ತಿರುವ ಬೇಡಿಕೆಗಳಿಗೆ ಇನ್ನಷ್ಟು ಪುಷ್ಟಿ ನೀಡುವ ಉದ್ದೇಶವನ್ನು ಹೊಂದಿದೆ.

ಐದು ದ್ರಾವಿಡ ಭಾಷೆಗಳಲ್ಲಿ ತುಳು ಕೂಡ ಒಂದು. ಇದು ಈಗ ಶೈಕ್ಷಣಿಕ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಇತರ ನಾಲ್ಕು ಭಾಷೆಗಳಾದ ತಮಿಳು, ಕನ್ನಡ, ಮಲಯಾಳಂ ಮತ್ತು ತೆಲುಗು ಈಗಾಗಲೇ ಸಾಂವಿಧಾನಿಕ ಮಾನ್ಯತೆಯನ್ನು ಗಳಿಸಿವೆ, ಆದರೆ ತುಳು ಹಿಂದುಳಿದಿದೆ. ರಾಜಕೀಯ ಪ್ರಭಾವದ ಕೊರತೆಯಿಂದಾಗಿ ತಮ್ಮ ಬೇಡಿಕೆಗಳನ್ನು ಕಡೆಗಣಿಸಲಾಗುತ್ತಿದೆ ಎಂದು ತುಳು ಸಂಘಟನೆಗಳು ಹೇಳುತ್ತವೆ. ಈಗ ಹೊಸದಾಗಿ ರೂಪುಗೊಂಡ ಪಕ್ಷವು ಮುಂದಿನ ದಿನಗಳಲ್ಲಿ ಚುನಾವಣಾ ಕ್ಷೇತ್ರಕ್ಕೆ ಪ್ರವೇಶಿಸಲಿದ್ದು ಬೇಡಿಕೆಗಳ ಪೂರೈಕೆಗೆ ಒತ್ತು ನೀಡಲಿದೆ.
ಪ್ರಸ್ತುತ ಅಸ್ತಿತ್ವದಲ್ಲಿರುವ ರಾಜಕೀಯ ಪಕ್ಷಗಳು, ತುಳು ಭಾಷೆ ಮತ್ತು ಸಂಸ್ಕೃತಿಯ ಅಭಿವೃದ್ಧಿಗೆ ಸಾಕಷ್ಟು ಬೆಂಬಲವನ್ನು ನೀಡುತ್ತಿಲ್ಲ ಎಂದು ತುಳು ಸಂಘಟನೆಗಳು ಆರೋಪಿಸಿವೆ. ''ಬಾರ್ಕೂರಿನಿಂದ ಹಿಡಿದು ಕಾಸರಗೋಡಿನವರೆಗೂ ಎಲ್ಲಾ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು.ಒಂದರಿಂದ ಎರಡು ವರ್ಷಗಳಲ್ಲಿ ಪಕ್ಷಕ್ಕೆ ತನ್ನದೇ ಆದ ಚಿಹ್ನೆ ಹೊಂದಲಿದೆ. ಚುನಾವಣಾ ಆಯೋಗವು ಯಾವುದೇ ಆಕ್ಷೇಪಣೆ ಪ್ರಮಾಣಪತ್ರವನ್ನು ನೀಡದ ನಂತರ, ಅದರ ಧ್ವಜವನ್ನು ಸಿದ್ಧಪಡಿಸಲಾಗುತ್ತದೆ'' ಎಂದು ಹೇಳಿದರು.
ದೆಹಲಿ, ಮುಂಬೈ ಮತ್ತು ಇತರ ಸ್ಥಳಗಳಿಂದ 500 ಕ್ಕೂ ಹೆಚ್ಚು ಜನರು ತುಳುವರೆ ಪಕ್ಷದ ಸದಸ್ಯರಾಗಿ ದಾಖಲಾಗಿದ್ದಾರೆ ಎಂದು ಹೇಳಲಾಗಿದೆ. ಮುಂದಿನ ದಿನಗಳಲ್ಲಿ, ಪಕ್ಷವು ತುಳು ಭಾಷೆ, ಸಂಸ್ಕೃತಿ ಮತ್ತು ಜೀವನ ಶೈಲಿಯ ರಕ್ಷಣೆಯೊಂದಿಗೆ ಚುನಾವಣೆಯಲ್ಲಿ ಹೋರಾಡಲಿದೆ.