ಕುಂದಾಪುರ, ಫೆ.28 (DaijiworldNews/MB) : ಸಾಸ್ತಾನ್ನ ಗುಂಡ್ಮಿ ಅಂಬಾಗಿಲು ಎಂಬಲ್ಲಿ ಕಾರು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರವಿವಾರ ಬೆಳ್ಳಿಗೆ ನಡೆದಿದೆ.




ಮೃತಪಟ್ಟ ಬೈಕ್ ಸವಾರನನ್ನು ಕೋಟಾದ ಬನ್ನಾಡಿ ನಿವಾಸಿ ಸುಭಾಷ್ ಅಮೀನ್ (45) ಎಂದು ಗುರುತಿಸಲಾಗಿದೆ. ಸಿವಿಲ್ ಗುತ್ತಿಗೆದಾರರಾಗಿದ್ದ ಅವರು ಬನ್ನಾಡಿಯಿಂದ ಉಡುಪಿಗೆ ತೆರಳುತ್ತಿದ್ದರು.
ಕಾರು ಚಾಲನೆ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. ಕೋಟಾ ಪೊಲೀಸ್ ಎಸ್ಐ ಸಂತೋಷ್ ಬಿಪಿ ಮತ್ತು ಸಿಬ್ಬಂದಿ ರಾಜು ಕೆ ರಾಮಣ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.