ಮಂಗಳೂರು, ಫೆ.28 (DaijiworldNews/MB) : ಶಿವಮೊಗ್ಗ ಮೂಲದ ಬಾಲಕನೋರ್ವ ಸುರತ್ಕಲ್ನ ಗುಡ್ಡೆಕೊಪ್ಲ ಬೀಚ್ನಲ್ಲಿ ಮುಳುಗಿ ಸಮುದ್ರ ಪಾಲಾಗಿರುವ ಘಟನೆ ರವಿವಾರ ನಡೆದಿದೆ.

ಬಾಲಕನನ್ನು ಮುಬಾರಕ್ (13) ಎಂದು ಗುರುತಿಸಲಾಗಿದೆ. ಬಾಲಕನ ತಂದೆಯನ್ನು ರಕ್ಷಣೆ ಮಾಡಲಾಗಿದೆ.
ಬಾಲಕ ತನ್ನ ತಂದೆ, ತಾಯಿಯೊಂದಿಗೆ ಸಂಬಂಧಿಕರ ಮನೆಯಲ್ಲಿ ನಡೆದ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದ ಎಂದು ಹೇಳಲಾಗಿದೆ. ಬಳಿಕ ಬಾಲಕ ತನ್ನ ತಂದೆ, ತಾಯಿ ಹಾಗೂ ಸಂಬಂಧಿಕರೊಂದಿಗೆ ಸಮುದ್ರ ತೀರಲ್ಲಿ ಆಟವಾಡಿದ್ದು ಈ ವೇಳೆ ತೆರೆಗೆ ಸಿಲುಕಿ ಸಮುದ್ರ ಪಾಲಾಗಿದ್ದಾನೆ.
ಪ್ರಸ್ತುತ ಸ್ಥಳೀಯರು ಹಾಗೂ ಸಿಎಸ್ಪಿ ಪೊಲೀಸರು ಬಾಲಕನ ಹುಡುಕಾಟ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.