ಬೆಳ್ತಂಗಡಿ, ಸೆ 28: ವ್ಯಕ್ತಿಯೊಬ್ಬರಿಗೆ ಮರ ಕದ್ದ ಆರೋಪದಲ್ಲಿ ಫಾರೆಸ್ಟರ್ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಸೆ,26 ರಂದು ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ನಿವಾಸಿ ಕಮಲ್ ದಾಸ್ ಮರಕೆಲಸದ ಉದ್ಯೋಗವನ್ನು ನೆಚ್ಚಿಕೊಂಡ ವ್ಯಕ್ತಿ. ಸೆಪ್ಟಂಬರ್ 26 ಸಂಜೆ ವೇಳೆಗೆ ಬೆಳ್ತಂಗಡಿ ಅರಣ್ಯ ಸಿಬ್ಬಂಧಿಯೊಬ್ಬ ಕಮಲ್ ದಾಸ್ ಮನೆಗೆ ಬಂದು ಸಾಹೇಬ್ರಿಂದ ಬುಲವ್ ಬಂದಿದ್ದು ತಕ್ಷಣ ಬರಬೇಕೆಂದು ಆತುರಾತುರವಾಗಿ ಕರೆಯಿಸಿಕೊಂಡು, ಬೀಟೆ ಮರವನ್ನು ಕದ್ದ ಆರೋಪಿಸಿ, ಬೆಳ್ತಂಗಡಿ ವಲಯದ ಫಾರೆಸ್ಟರ್ ಕೀರ್ತನ್, ಕಮಲ್ ದಾಸ್ ಗೆ ಹಿಗ್ಗಾ ಮುಗ್ಗಾ ಹೊಡೆದು ಮರ್ಮಾಂಗಕ್ಕೂ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ವ್ಯಕ್ತಿಯ ದೇಹದಲ್ಲಿ ರಕ್ತಹೆಪ್ಪುಗಟ್ಟಿದ್ದು ವಿಷಯ ತಿಳಿದ ಗ್ರಾಮಸ್ಥರು ಬೆಳ್ತಂಗಡಿ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿ ಕೀರ್ತನ್ ನ್ನು ತಕ್ಷಣ ವಜಾ ಮಾಡಬೇಕೆಂದು ಆಗ್ರಹಿಸಿದರು. ಮನಸ್ಸೋಇಚ್ಚೆ ಥಳಿಸಿರುವ ಅರಣ್ಯ ಸಿಬ್ಬಂದಿಗಳು "ಅರಣ್ಯಾಧಿಕಾರಿಗಳು ಹೊಡೆದಿಲ್ಲ ಎಂದು ಪತ್ರ ಬರೆದು ಸಹಿ ಮಾಡಿಸಿಕೊಂಡಿದ್ದಾರೆ" ಎಂದು ಕಮಲ್ ದಾಸ್ ಆರೋಪಿಸುತ್ತಿದ್ದು, ಅಸ್ವಸ್ಥಗೊಂಡ ಕಮಲ್ ದಾಸ್ ಗೆ ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ರತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ದಾಖಲಿಸಲಾಗಿದೆ. ಇನ್ನು ಕಮಲ್ ದಾಸ್ ನನ್ನು ವಶಕ್ಕೆ ಪಡೆದಿರುವ ಬಗ್ಗೆ ಯಾವುದೇ ಪ್ರಕರಣ ಅರಣ್ಯ ಇಲಾಖೆಯಲ್ಲಿ ದಾಖಲಾಗಿಲ್ಲ.