ಉಡುಪಿ, ಜು 18: ಉದ್ಯಮಿ ಭಾಸ್ಕರ್ ಶೆಟ್ಟಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಾಕ್ಷಿಗಳ ವಿಚಾರಣೆ ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಜು 18 ರ ಬುಧವಾರ ನ್ಯಾಯಾಲಯ ಸಮನ್ಸ್ ನೀಡಿದ ಇತರೆ 10 ಮಂದಿ ಸಾಕ್ಷಿಗಳ ವಿಚಾರಣೆ ನಡೆಯಲಿದೆ. ಪ್ರಕರಣದ ವಿಚಾರಣೆ ಜು.19 ರವರೆಗೆ ನಡೆಯಲಿರುವ ಹಿನ್ನಲೆಯಲ್ಲಿ ನ್ಯಾಯಾಲಯದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮುಂದುವರಿದಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಕರಣದ ಮೊದಲ ತನಿಖಾಧಿಕಾರಿಯಾಗಿರುವ ಮತ್ತು ಸಾಕ್ಷಿಯೂ ಆಗಿರುವ ಅಂದಿರುವ ಮಣಿಪಾಲ ಪೊಲೀಸ್ ಠಾಣೇ ನಿರೀಕ್ಷಕ ಗಿರೀಸ್ ಮತ್ತು ಮೃತ ಭಾಸ್ಕರ ಶೆಟ್ಟಿ ಮತ್ತು ಅವರ ಅವರ ತಾಯಿ ಗುಲಾಬಿ ಶೆಡ್ತಿ ಅವರನ್ನು ಆರೋಪಿ ಪರ ವಕೀಲರು ಮಂಗಳವಾರ ಪಾಟಿ ಸವಾಲು ನಡೆಸಿದರು.
ಪ್ರಕರಣದ ಆರೋಪಿಗಳಾದ ರಾಜೇಶ್ವರಿ ಶೆಟ್ಟಿ(50) ನವನೀತ್ ಶೆಟ್ಟಿ (20) ನಂದಳಿಕೆ ನಿರಂಜನ್ ಭಟ್ (26) ಅವರನ್ನು ಪೊಲೀಸರು ಮಂಗಳೂರು ಜೈಲಿನಿಂದ ಕರೆತಂದು ನ್ಯಾಯಾಲಕ್ಕೆ ಹಾಜರುಪಡಿಸಿದ್ದರು. ಪ್ರಕರಣದಲ್ಲಿ ಸಾಕ್ಷ್ಯನಾಶ ಆರೋಪಿಗಳಾದ ನಿರಂಜನ ಭಟ್ ತಂದೆ ಶ್ರೀನಿವಾಸ್ ಭಟ್ ಹಾಗೂ ಕಾರು ಚಾಲಕ ರಾಘವೇಂದ್ರ ನ್ಯಾಯಾಲಕ್ಕೆ ಹಾಜರಾಗಿದ್ದರು.