ಉಡುಪಿ, ಜು : ಮೀನುಗಾರಿಕಾ ಬೋಟು ಖರೀದಿ ನೆಪದೊಂದಿಗೆ ಅನಧಿಕೃತ ಸಂಸ್ಥೆ ಖಾಲಿ ಜಾಗ ತೋರಿಸಿ ಕರ್ಣಾತಕ ಬ್ಯಾಂಕ್ ಗೆ ೨೫ ಲಕ್ಷ ರೂಪಾಯಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿ ಮಿಲಿಯಾನ ಫರ್ನಾಂಡಿಸ್ ಎಂಬಾತ ಸರಸ್ವತಿ ಬೋಟ್ ಸಂಸ್ಥೆಯಿಂದ ಬೋಟ್ ಖರೀದಿ ಮಾಡಲು ಉಡುಪಿ ಕರ್ನಾಟಕ ಬ್ಯಾಂಕ್ ನಿಂದ 2011 ಜುಲೈ 18 ರಂದು 25 ಲಕ್ಷ ರೂಪಾಯಿ ಸಾಲ ಪಡೆದಿದ್ದ.
ಸಾಲಕ್ಕೆ ಗಿಲ್ಬರ್ಟ್ ಫರ್ನಾಂಡಿಸ್ ಎಂಬಾತ ಗ್ಯಾರಂಟಿದಾರನಾಗಿದ್ದ. ಆದರೆ ಮಿಲಿಯಾನ ಫರ್ನಾಂಡಿಸ್ ಸಾಲ ಮರು ಪಾವತಿ ಮಾಡುವುದನ್ನು ನಿಲ್ಲಿಸಿದ್ದ. ಬ್ಯಾಂಕ್ ನವರು ಬೋಟ್ ಖರೀದಿ ಮಾಡಿದ ಸಂಸ್ಥೆಯ ಟಿ.ಎ ಸಲೀಂ ಎಂಬಾತನನ್ನು ವಿಚಾರಿಸಿದಾಗ, ತನ್ನಿಂದ ಸೆಕೆಂಡ್ ಹ್ಯಾಂಡ್ ಬೋಟ್ ಖರೀದಿಸಿದ್ದು, ಸರಸ್ವತಿ ಬೋಟ್ ಸಂಸ್ಥೆ ನನ್ನದಲ್ಲ ಎಂದಿದ್ದಾರೆ. ವಾಸ್ತವದಲ್ಲಿ ಸರಸ್ವತಿ ಬೋಟ್ ಸಂಸ್ಥೆಯೇ ಇಲ್ಲ. ಅಲ್ಲದೇ ಬ್ಯಾಂಕಿನ ಮೋರ್ಟ್ ಗೇಜ್ ಮಾಡಿರುವ ಉಪ್ಪೂರು ಗ್ರಾಮದ 12 ಸೆಂಟ್ಸ್ ಜಾಗಕ್ಕೆ 10.85 ಲಕ್ಷ ರೂ. ಮೌಲ್ಯ ನಿಗದಿ ಆಗಿದ್ದು, ಆರೋಪಿ ಬೇರೆ ಜಾಗ ತೋರಿಸಿ ಮೌಲ್ಯ ನಿಗದಿ ಮಾಡಿದ್ದಾನೆ. ಈಗಿನ ಬೆಲೆ 34 ಸಾವಿರ ರೂಪಾತಿ ಹೈಪೋಥಿಕೇಶನ್ ಮಾಡಿರುವ ಓಷಿಯನ್ ಸ್ಟಾರ್ ಬೋಟನ್ನು ಮಿಲಿಯಾನ ಫಾರ್ನಾಂಡಿಸ್ ಲಕ್ಷ್ಮಣ ಶೆಟ್ಟಿ ಎಂಬಾತನಿಗೆ ಮಾರಾಟ ಮಾಡಿದ್ದಾನೆ.
ಮಿಲಿಯಾನ್ ಫರ್ನಾಂಡಿಸ್ ಸೇರಿದಂತೆ ಇತರ ಆರೋಪಿಗಳಾದ ಟಿ.ಎ ಸಲೀಂ ಲಕ್ಷ್ಮಣ ಶೆಟ್ಟಿ , ಗಿಲ್ಬರ್ಟ್ ಫರ್ನಾಂಡಿಸ್ ಉದ್ದೇಶ ಪೂರ್ವಕವಾಗಿ ಸಂಚು ನಡೆಸಿ ಸುಳ್ಳು ದಾಖಲಾತಿ ಸೃಷ್ಟಿಸಿ ಬ್ಯಾಂಕಿಗೆ ವಂಚನೆ ಮಾಡಿದ್ದಾರೆ ಎಂದು ನ್ಯಾಯಾಲಯದಲ್ಲಿ ಬ್ಯಾಂಕ್ ದೂರು ಸಲ್ಲಿಸಿತ್ತು. ಹೀಗಾಗಿ ಪೊಲೀಸ್ ಠಾಣೆಯಲ್ಲಿ ಇದೀಗ ಪ್ರಕರಣ ದಾಖಲಾಗಿದೆ.