ಮಂಗಳೂರು, ಜು 18: ವೈದ್ಯರ ಚೀಟಿ ಇಲ್ಲದೆ ನಗರದ ಮೆಡಿಕಲ್ ಶಾಪೊಂದರಲ್ಲಿ ಟ್ಯಾಬ್ಲೆಟ್ ನೀಡುತ್ತಿದ್ದು ಈ ಬಗ್ಗೆ ಮಾಹಿತಿ ಪಡೆದ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ, ನಿಷೇಧಿತ ಔಷಧ ವಶಪಡಿಸಿಕೊಂಡಿದ್ದಾರೆ. ನಗರದ ಪಿವಿಎಸ್ ಸಮೀಪದ ಹೆಲ್ತ್ಕೇರ್ ಮೆಡಿಕಲ್ ಶಾಪ್ನಲ್ಲಿ ಟ್ಯಾಬ್ಲೆಟ್ಗಳನ್ನು ಮಾರಾಟ ಮಾಡುತ್ತಿದ್ದರು.
ಕೇಂದ್ರ ಉಪವಿಭಾಗ ಸಹಾಯಕ ಪೊಲೀಸ್ ಆಯುಕ್ತರು, ಉರ್ವ ಠಾಣೆ ಮತ್ತು ಪೂರ್ವ ಪೊಲೀಸ್ ಠಾಣಾ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಮೆಡಿಕಲ್ ಶಾಪ್ ಮಾಲಕರ ವಿರುದ್ಧ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.