ಉಡುಪಿ, ಜು 19: ಶಿರೂರು ಶ್ರೀಗೆ ಪಟ್ಟದ ದೇವರು ಕೊಡದ್ದಕ್ಕೆ ಕಾರಣ ಇದೆ. ಶಿರೂರು ಶ್ರೀಗಳಿಗೆ ನೈತಿಕತೆ ಇಲ್ಲ. ನನಗೆ ಮಕ್ಕಳಿದ್ದಾರೆ ಎಂದು ಹೇಳಿಕೊಂಡ ಕಾರಣಕ್ಕೆ ಶಿರೂರು ಶ್ರೀಗಳಿಗೆ ಪಟ್ಟದ ದೇವರನ್ನು ನೀಡಿಲ್ಲ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಉತ್ತರ ಕನ್ನಡದ ಶಿರಸಿಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಪೇಜಾವರ ಶ್ರೀಗಳು, ಶಿರೂರು ಶ್ರೀಗಳು ಸನ್ಯಾಸತ್ವವನ್ನು ಬಿಟ್ಟಿದ್ದಾರೆ. ಈ ಕಾರಣಕ್ಕೆ ಅವರ ಅಂತಿಮ ಸಂಸ್ಕಾರದಲ್ಲಿ ಯಾವೊಬ್ಬ ಶ್ರೀಗಳೂ ಭಾಗಿಯಾಗುವುದಿಲ್ಲ. ನನಗೆ ಮಗನಿದ್ದಾನೆ ಎಂದು ಸ್ವಾಮೀಜಿಗಳು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಸ್ವಾಮೀಜಿಗಳಾಗಲು ಸಾಧ್ಯವಿಲ್ಲ. ಅಲ್ಲದೆ ಅಂತ್ಯಕ್ರಿಯೆಗೆ ಹೋಗದಿರಲು ತಾತ್ವಿಕ, ನೈತಿಕ ಕಾರಣಗಳಿವೆ ಎಂದು ಪೇಜಾವರ ಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ.