ಬಂಟ್ವಾಳ, ಜು 19: ಪೊಳಲಿ ಕ್ಯಾಂಡಲ್ ಸಂತು ಯಾನೆ ಸಂತೋಷ್ ಅವರ ಕೊಲೆ ಪ್ರಕರಣದ ಇಬ್ಬರು ಪ್ರಮುಖ ಅರೋಪಿಗಳ ವಿರುದ್ಧ ನಾಲ್ಕನೇ ಹೆಚ್ಚವರಿ ಮಂಗಳೂರು ಸೆಶನ್ಸ್ ನ್ಯಾಯಲಯ ತೀರ್ಪು ಪ್ರಕಟಿಸಿದೆ. ಬಂದರು ನಿವಾಸಿ ಇಕ್ಬಾಲ್ ಹಾಗೂ ಕಾರ್ಕಳ ಬಂಗ್ಲೆಗುಡ್ಡೆ ನಿವಾಸಿ ಫಾರೂಕ್ ಅವರ ವಿರುದ್ಧ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಬಂಟ್ವಾಳ ತಾಲೂಕಿನ ಬಡಕಬೈಲು ನಿವಾಸಿ ಕ್ಯಾಂಡಲ್ ಸಂತು ಬಡಕಬೈಲುಬಮೋರಿಯಲ್ಲಿ ಕುಳಿತು ಕೊಂಡಿದ್ದ ವೇಳೆ 2009ರಲ್ಲಿ ಬೆಳಿಗ್ಗೆ ಸುಮಾರು ಹತ್ತು ಗಂಟೆ ಸಮಯದಲ್ಲಿ ಸ್ಕಾರ್ಫಿಯೋದಲ್ಲಿ ಬಂದ ದುಷ್ಕರ್ಮಿಗಳ ತಂಡ ತಲವಾರಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 22 ಜನ ಆರೋಪಿಗಳಿದ್ದು ಅದರಲ್ಲಿ ಪ್ರಮುಖ ಎರಡು ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಶಿಕ್ಷೆಯ ಪ್ರಮಾಣ ನಾಳೆ ಪ್ರಕಟಗೊಳ್ಳಲಿದೆ. ಈ ಪ್ರಕರಣದ ನಾಲ್ಕು ಆರೋಪಿಗಳು ಈಗಾಗಲೇ ಮೃತಪಟ್ಟಿದ್ದಾರೆ. ಮಾಡೂರು ಇಸುಬು ಜೈಲಿನಲ್ಲಿ ಕೊಲೆಯಾದರೆ, ಮಾಡೂರು ಇಸ್ಮಾಯಿಲ್ ಹೃದಾಯಘಾತಗೊಂಡು ಮರಣಹೊಂದಿದ್ಧಾನೆ. ಕುಕ್ಕಂದರೂರು ನಿವಾಸಿ ಸುಲೈಮಾನ್ ಯಾನೆ ಖಾದರ್ ಕಾರ್ಕಳ ದಲ್ಲಿ ಕೊಲೆಯಾಗಿದ್ದಾನೆ. ವಾಮಂಜೂರು ನಿವಾಸಿ ಮಹಮ್ಮದ್ ಕಬೀರ್ ವಾಮಾಂಜೂರಿನಲ್ಲಿ ಕೊಲೆಯಾಗಿದ್ದಾನೆ. ಉಳಿದಂತೆ ಅಬ್ಬಾಸ್ ಬಂಟ್ವಾಳ, ಇಸಾಕ್ ಬಂಟ್ವಾಳ ಹಾಗೂ ಹಬೀದ್ ತಲೆಮರೆಸಿಕೊಂಡಿದ್ದಾರೆ.