ಬಂಟ್ವಾಳ, ಜು 21: ಬಂಟ್ವಾಳ ತಾಲೂಕು ಕೇಪು ಗ್ರಾಮದ ಚಿಮಿನಿಯಡ್ಕದ ಮನೆಯೊಂದರಲ್ಲಿ ಜೂಜಾಟದಲ್ಲಿ ತೊಡಗಿದ್ದ ಆರೋಪದ ಮೇರೆಗೆ ಏಳು ಮಂದಿಯನ್ನು ವಿಟ್ಲ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕಾಸರಗೋಡು ನಿವಾಸಿಗಳಾದ ರಾಧಾಕೃಷ್ಣ ಶೆಟ್ಟಿ, ಬಾಬು ಪೂಜಾರಿ, ಕಮಲಾಕ್ಷ ಪೂಜಾರಿ, ಸ್ಟೀವನ್ ಡಿಸೋಜಾ ಹಾಗೂ ಬದಿಯಡ್ಕದ ಬೆಳಾ ಗ್ರಾಮದ ನಿವಾಸಿಗಳಾದ ವಿಜಯನ್ ಡಿ, ಚಂದ್ರನ್ ಯು, ಪೆರ್ಲದ ನಿವಾಸಿ ಬಾಬು ಪೂಜಾರಿ ಎಂದು ಗುರುತಿಸಲಾಗಿದೆ. ದಾಳಿ ವೇಳೆ 65,960 ರೂಪಾಯಿಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುನ್ನಡೆಸಲಾಗಿದೆ.