ಮಂಗಳೂರು , ಜು 22: ಈಜಲೆಂದು ಹೋದ ಯುವಕನೊಬ್ಬ ಈಜುಕೊಳದಲ್ಲಿ ಮುಳುಗಿ ಮೃತಪಟ್ಟ ಘಟನೆ ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೊಂಟೆಪದವು ಬಳಿಯ ಗುದ್ರು ಎಂಬಲ್ಲಿ ಜು 22 ರ ಬಾನುವಾರ ನಡೆದಿದೆ. ಮೃತ ಯುವಕನನ್ನು ಉಳ್ಳಾಲ ಅಳೇಕಲದ ಖಲೀಲ್ (30) ಎಂದು ಗುರುತಿಸಲಾಗಿದೆ.
ಭಾನುವಾರ ಸಂಜೆ ಉಳ್ಳಾಲ ಅಳೇಕಲದ ಐದು ಮಂದಿ ಯುವಕರ ತಂಡ ಮೊಂಟೆಪದವಿನ ಗುದ್ರುವಿನಲ್ಲಿರುವ ಗುದ್ರು ಅಬ್ಬಾಸ್ ಮಾಲಿಕತ್ವದ ಈಜು ಕೊಳದಲ್ಲಿ ಆಟವಾಡುತಿದ್ದ ಸಂದರ್ಭ ಖಲೀಲ್ ನೀರಿನಲ್ಲಿ ಮುಳುಗಿದ್ದು ತಕ್ಷಣಕ್ಕೆ ಯಾರ ಅರಿವಿಗೂ ಬಂದಿರಲಿಲ್ಲ ಎನ್ನಲಾಗಿದೆ. ಸ್ವಲ್ಪ ಹೊತ್ತಿನ ಬಳಿಕ ಖಲೀಲ್ ಅವರನ್ನು ಹುಡುಕುವ ಯತ್ನ ನಡೆದಿದ್ದು, ಸುಮಾರು ಅರ್ಧ ತಾಸಿನ ಬಳಿಕ ಖಲೀಲ್ ಅವರನ್ನು ಕೊಳದ ಆಳದಿಂದ ಹೊರತೆಗೆಯಲಾಗಿದ್ದು, ಈ ವೇಳೆ ಅವರು ಮೃತಪಟ್ಟಿದ್ದರು.
ಗುದ್ರು ಅಬ್ಬಾಸ್ ಅವರ ಮನೆಯ ಪಕ್ಕ ಇದ್ದ ದೊದ್ಡ ಕೆರೆಯನ್ನು ನವೀಕರಣಗೊಳಿಸಿ ಈಜುಕೊಳವಾಗಿ ಮಾರ್ಪಡಿಸಲಾಗಿತ್ತು. ಹಾಗಾಗಿ ಈ ಕೊಳದಲ್ಲಿ ಈಜಲೆಂದು ನಿತ್ಯವೂ ನೂರಾರು ಮಂದಿ ಬರುತ್ತಿದ್ದರು.ಇನ್ನು ಬಾನುವಾರದಂದೂ ಈಜಲು ಬರುವವರ ಸಂಖ್ಯೆ ೩೦೦ ಕ್ಕೂ ಹೆಚ್ಚು ಇತ್ತು ಎನ್ನಲಾಗಿದೆ. ಈಜಲು ಬರುವವರಿಗೆ ಶುಲ್ಕವೂ ನಿಗದಿಪಡಿಸಲಾಗಿದೆ. ನೀಡಲು ಸುಸಜ್ಜಿತ ಕೆರೆಯಾಗಿದ್ದರೂ ನುರಿತ ಈಜುಗಾರರು ಸೇರಿದಂತೆ ಇನ್ನಿತರ ರಕ್ಷಣಾ ವ್ಯವಸ್ಥೆಗಳು ಇರಲಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.