ಬ್ರಹ್ಮಾವರ, ಜು 24 : ದಂಪತಿ ಮಧ್ಯೆ ನಡೆದ ಕೌಟುಂಬಿಕ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಜು ೨೩ ರ ಸೋಮವಾರ ಹೇರೂರು ಬಳಿ ನಡೆದಿದೆ. ಕೊಲೆಗೀಡಾದ ಮಹಿಳೆಯನ್ನು ಗಿರಿಜಾ ಪೂಜಾರಿ ೫೨ ಎಂದು ಗುರುತಿಸಲಾಗಿದೆ. ಗಿರಿಜಾ ಕೊಳಲಗಿರಿಯ ಮಗಳ ಮನೆಯಲ್ಲಿದ್ದು, ಅಪರೂಪಕ್ಕೊಮ್ಮೆ ಹೇರೂರಿಗೆ ಬರುತ್ತಿದ್ದರು. ಸೋಮವಾರ ಬೆಳಗ್ಗೆಯಷ್ಟೇ ಹೇರೂರಿಗೆ ಬಂದಿದ್ದರು. ಕೌಟುಂಬಿಕ ಹಾಗೂ ಸಾಲದ ವಿಚಾರವಾಗಿ ಪತಿ ಪತ್ನಿ ಮಧ್ಯೆ ಜಗಳ ನಡೆದಿದ್ದು ಈ ಸಂದರ್ಭ ರೊಚ್ಚಿಗೆದ್ದಿದ್ದ ಆರೋಪಿ ಪತಿ ರಾಜು ಪೂಜಾರಿ ಕತ್ತಿಯಿಂದ ಕಡಿದಿದ್ದಾನೆ. ತೀವ್ರ ರಕ್ತ ಸ್ರಾವಗೊಂಡ ಗಿರಿಜಾ ಸ್ಥಳದಲ್ಲೇ ಸಾವನಪ್ಪಿದ್ದಾನೆ.
ಆರೋಪಿಯೂ ತನ್ನ ಪತ್ನಿಯನ್ನು ಮಧ್ಯಾಹ್ನವೇ ಕೊಲೆಗೈದಿದ್ದಾನೆ ಎನ್ನಲಾಗಿದ್ದು, ಸಂಜೆಯಾದ ಮೇಲೆ ಮನೆ ಸಮೀಪದ ನದಿಗೆ ಶವವನ್ನು ಎಸೆಯುವ ಉದ್ದೇಶದಿಂದ ಸಾಗಿಸುವಾಗ ಪ್ರಕರನ ಬೆಳಕಿಗೆ ಬಂದಿದೆ.ಇವರ ಪುತ್ರನೂ ಕೂಡಾ ಪ್ರತ್ಯೇಕವಾಗಿ ಅಮ್ಮಂಜೆಯಲ್ಲಿ ವಾಸವಾಗಿದ್ದಾರೆ. ಬ್ರಹ್ಮಾವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.