ಕಾಪು, ಮಾ.01 (DaijiworldNews/PY): ಕಾಪು ಹಿಟ್ ಆಂಡ್ ರನ್ ಪ್ರಕರಣ ದ್ವಿಚಕ್ರ ವಾಹನ ಸವಾರ ಹಾಗೂ ಸಹ ಸವಾರ ಗಾಯಗೊಂಡ ಘಟನೆ ಫೆ.28ರ ರವಿವಾರ ನಡೆದಿದೆ.

ಇಲ್ಲಿನ ಉಲಿಯಾರು ಗ್ರಾಮದಲ್ಲಿ ವಾಸಿಸುತ್ತಿರುವ ಕಾರ್ಕಳ ತಾಲೂಕಿನ ಸಾಣೂರಿನ ಮುರತಂಗಡಿ ನಿವಾಸಿ ರಾಜೇಶ್ (35) ಅವರು, ರವಿವಾರ ರಾತ್ರಿ 7 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ತಿಳಿಸಿದ್ದಾರೆ.
ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ತಮ್ಮ ಸ್ನೇಹಿತ ಅಖಿಲ್ ಎಂಬುವವರೊಂದಿಗೆ ಕಾರ್ಕಳದಿಂದ ಶಿರ್ವಾ ಮೂಲಕ ಕಾಪುವಿಗೆ ಹೋಗುತ್ತಿದ್ದ ವೇಳೆ ಇನ್ನೋವಾ ಕಾರೊಂದು ಅತಿ ವೇಗವಾಗಿ ಬಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಸವಾರಿಬ್ಬರೂ ರಸ್ತೆ ಬಿದ್ದಿದ್ದಾರೆ. ಪರಿಣಾಮ ರಾಜೇಶ್ ಅವರ ಬಲ ಕಾಲು ಮುರಿತಕ್ಕೊಳಗಾಗಿದ್ದು, ಅಖಿಲ್ ಅವರ ಮೊಣಕಾಲು ಹಾಗೂ ಬಲಗಾಲಿಗೆ ಗಂಭಿರ ಗಾಯಗಳಾಗಿವೆ.
ಕಾರಿನ ಚಾಲಕ ಡಿಕ್ಕಿ ಹೊಡೆದು ಕಾರನ್ನು ನಿಲ್ಲಿಸದೇ ಹೋಗಿದ್ದಾನೆ ಎಂದು ರಾಜೇಶ್ ತಿಳಿಸಿದ್ದಾರೆ.
ಘಟನೆ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.