ಮಂಗಳೂರು, ಮಾ. 01(DaijiworldNews/HR): 2017 ರಿಂದ ಇಲ್ಲಿಯವರೆಗೆ ಅಕ್ರಮ ಸಾಗಾಟ ಮಾಡುತ್ತಿದ್ದ 95.12 ಕೆ.ಜಿ ಚಿನ್ನವನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಶಪಡಿಸಿಕೊಳ್ಳಲಾಗಿದೆ.

ಸಾಂಧರ್ಭಿಕ ಚಿತ್ರ
ವಿದೇಶದಿಂದ ಆಗಮಿಸಿದ ಪ್ರಯಾಣಿಕರಿಂದ ಈ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ಹಕ್ಕು ಅರ್ಜಿ ಅಡಿಯಲ್ಲಿ ಕಸ್ಟಮ್ಸ್ ಸಹಾಯಕ ಆಯುಕ್ತರು ಮಾಹಿತಿ ನೀಡಿದ್ದಾರೆ.
ಕಸ್ಟಮ್ಸ್ ಆಕ್ಟ್ 1962 ರ ಪ್ರಕಾರ ಕ್ರಮಗಳನ್ನು ಕೈಗೊಂಡ ಬಳಿಕ ವಶಪಡಿಸಿಕೊಂಡ ಚಿನ್ನವನ್ನು ಕಾಲ ಕಾಲಕ್ಕೆ ವಿಲೇವಾರಿ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಚಿನ್ನವನ್ನು ಚಾಕೊಲೇಟ್ಗಳು, ಚೂಯಿಂಗ್ ಗಮ್, ಫೇಸ್ ಕ್ರೀಮ್, ಮೇಕಪ್ ಕಿಟ್, ಎಲೆಕ್ಟ್ರಾನಿಕ್ ಉಪಕರಣಗಳು, ಪೆನ್, ಟ್ರಾಲಿ ಚಕ್ರಗಳ ಒಳಗೆ ಮತ್ತು ಗುದದ್ವಾರದಲ್ಲಿ ಮಾತ್ರೆ ರೂಪದಲ್ಲಿ ಇರಿಸಿಕೊಂಡು ಸಾಗಿಸುತ್ತಿದ್ದರು ಎನ್ನಲಾಗಿದೆ.
ಇನ್ನು 2017-18ರಲ್ಲಿ19.45 ಕೆ.ಜಿ ಚಿನ್ನ, 2018-19ರಲ್ಲಿ 41.58 ಕೆ.ಜಿ, 2019-20ರಲ್ಲಿ 22.37 ಕೆ.ಜಿ ಮತ್ತು 2020 ರಲ್ಲಿ 11.72 ಕೆ.ಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಈ ಚಿನ್ನದ ಒಟ್ಟು ಮೌಲ್ಯ 32.98 ಕೋಟಿ ರೂ. ಎಂದು ತಿಳಿದು ಬಂದಿದೆ.