ಕಾರ್ಕಳ, ಮಾ.02 (DaijiworldNews/HR): ಕಾರ್ಕಳ ತಾಲೂಕಿನ ಬೈಲೂರಿನಲ್ಲಿ ಹೂಳು ತೆಗೆಯುವುದಕ್ಕಾಗಿ ಬಾವಿಗೆ ಇಳಿದಿದ್ದ ವೇಳೆ ಆಮ್ಲಜನಕ ಕೊರತೆಯಿಂದ ಓರ್ವ ಕಾರ್ಮಿಕ ಉಸುರುಗಟ್ಟಿ ಸಾವನ್ನಪ್ಪಿ, ಇಬ್ಬರು ಅಸ್ವಸ್ಥಗೊಂಡ ಘಟನೆ ನಡೆದಿದೆ.

ಸಾಂಧರ್ಭಿಕ ಚಿತ್ರ
ಮೃತಪಟ್ಟ ಕಾರ್ಮಿಕನನ್ನು ಮೂಡುಬಿದರೆ ಕೋಟೆಬಾಗಿಲು ನಿವಾಸಿ ಮಣಿ(24) ಎಂದು ಗುರುತಿಸಲಾಗಿದೆ.
ಇನ್ನು ಅಸ್ವಸ್ಥಗೊಂಡಿದ್ದ ಇಬ್ಬರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿ ಎಂದು ತಿಳಿದು ಬಂದಿದೆ.