ಉಪ್ಪಿನಂಗಡಿ, ಮಾ.03 (DaijiworldNews/MB) : ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿ ಸ್ಟೇಟಸ್ ಹಾಕಿದ ಕಾರಣಕ್ಕಾಗಿ ಹಿಂದೂ ಯುವಕನೋರ್ವನ ಮನೆಯ ಬಳಿಗೆ ಬಂದು ಮುಸ್ಲಿಂ ಯುವಕ ಹಲ್ಲೆಗೆ ಯತ್ನಿಸಿದ ಘಟನೆ ಆದರ್ಶನಗರ ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿದೆ ಎಂದು ವರದಿಯಾಗಿದೆ.


ಆದರ್ಶನಗರದ ಮುಕುಂದ್ ಎಂಬವರು ತಮ್ಮ ವಾಟ್ಸಾಪ್ನಲ್ಲಿ ರಾಮ ಮಂದಿರ ವಿಚಾರಕ್ಕೆ ಸಂಬಂಧಿಸಿ ಸ್ಟೇಟಸ್ ಹಾಕಿದ್ದು ಇದಕ್ಕೆ ಹಲ್ಲೆಗೆ ಯತ್ನಿಸಿದ್ದ ಯುವಕ ವಾಟ್ಸಾಪ್ ಮೂಲಕ ಪ್ರತಿಕ್ರಿಯೆ ನೀಡಿದ್ದಾನೆ ಎಂದು ಹೇಳಲಾಗಿದೆ.
ಈ ವಿಚಾರದಲ್ಲೇ ಅವರಿಬ್ಬರ ನಡುವೆ ಚರ್ಚೆ ನಡೆದಿದ್ದು ಮುಕುಂದ್ ಮನೆಯ ಬಳಿಗೆ ಬಂದ ಆ ಯುವಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.
ಇನ್ನು ಮುಕುಂದ್ ಮನೆಯವರು ಕೂಡಾ ಆ ಯುವಕನೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ ಎಂದು ಕೂಡಾ ತಿಳಿದು ಬಂದಿದೆ. ಪ್ರಸ್ತುತ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
https://www.facebook.com/watch/live/?v=469947764160967&ref=watch_permalink