ಉಳ್ಳಾಲ, ಮಾ. 03 (DaijiworldNews/SM): ಉಳ್ಳಾಲದಲ್ಲಿರುವ ಅನಾಥಾಶ್ರಮ ಹಾಗೂ ಶಾಲೆಗೆ ದೇಣಿಗೆ ಹಣವನ್ನು ಹಸ್ತಾಂತರಿಸಲು ಹೊರಟಿದ್ದ ಗರ್ಭಿಣಿ ಮಹಿಳೆಯೊಬ್ಬರು ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಮಾರ್ಚ್ 2 ರ ಮಂಗಳವಾರ ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಲಾಪು ಎಂಬಲ್ಲಿ ಈ ಘಟನೆ ನಡೆದಿದೆ.

ನಾಪತ್ತೆಯಾದ ಗರ್ಭಿಣಿಯನ್ನು ಸೋಮೇಶ್ವರ ಒಂಬತ್ತುಕೆರೆ ನಿವಾಸಿ ಇಬ್ರಾಹಿಂ ಎಂಬವರ ಪತ್ನಿ ಹಿನಾಜ್(25) ಎಂದು ಗುರುತಿಸಲಾಗಿದೆ. ಅವರು ಪತಿಯೊಂದಿಗೆ ವಿದೇಶದಲ್ಲಿದ್ದರು ಮತ್ತು ಕೆಲವು ವಾರಗಳ ಹಿಂದೆ ತಮ್ಮ ತವರೂರಿಗೆ ಮರಳಿದ್ದರು. ಪ್ರತಿಜ್ಞೆಯನ್ನು ಪೂರೈಸಲು ಹಣವನ್ನು ಹಸ್ತಾಂತರಿಸಲು ಹಿನಾಜ್ ಮಾರ್ಚ್ 2 ರಂದು ಮಧ್ಯಾಹ್ನ 12 ಗಂಟೆಗೆ ಕಲ್ಲಾಪು ಒಳ ರಸ್ತೆಯಲ್ಲಿರುವ ಅನಾಥಾಶ್ರಮ-ಕಮ್-ಶಾಲೆಗೆ ಮನೆಯಿಂದ ಹೊರಟಿದ್ದಾರೆ. ಅವರು ಒಂಬತ್ತುಕೆರೆಯಿಂದ ಬಸ್ನಲ್ಲಿ ಪ್ರಯಾಣಿಸಿ ಕಲ್ಲಾಪುವಿನಲ್ಲಿ ಇಳಿದಿದ್ದಾರೆ. ನಂತರ ಅವರು ಅಲ್ಲಿಂದ ಆಟೋರಿಕ್ಷಾವನ್ನು ಬಾಡಿಗೆಗೆ ಪಡೆದಿದ್ದು, ಬಳಿಕ ನಾಪತ್ತೆಯಾಗಿದ್ದಾರೆ.
ಹಿನಾಜ್ ಒಂದು ವರ್ಷದ ಮಗುವನ್ನು ಹೊಂದಿದ್ದು ಪ್ರಸ್ತುತ ಗರ್ಭಿಣಿಯಾಗಿದ್ದಾರೆ. ಅನಾಥಾಶ್ರಮ-ಕಮ್-ಶಾಲೆಗೆ ಹೋಗದೆ ಅವರು ನಾಪತ್ತೆಯಾಗಿದ್ದಾಳೆ ಎಂದು ಆಕೆಯ ಕುಟುಂಬ ಸದಸ್ಯರು ತೀಲಿಸಿದ್ದಾರೆ. ಅವರು 7,000 ರೂ. ನಗದು ಹೊಂದಿದ್ದರು. ಮತ್ತು ಚಿನ್ನದ ಆಭರಣಗಳನ್ನು ಧರಿಸಿದ್ದರು ಎನ್ನಲಾಗಿದೆ.
ಇಬ್ರಾಹಿಂ ನೀಡಿದ ದೂರಿನ ಆಧಾರದ ಮೇಲೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.