ಉಡುಪಿ, ಮಾ 04 (DaijiworldNews/MS): ಕುಂದಾಪುರ - ಮಂಗಳೂರು ಹೆದ್ದಾರಿ ಎರಡೂ ಪಾಶ್ವದಲ್ಲಿ ಎಸೆಯಲಾಗಿದ್ದ ಕಸವನ್ನು ಸ್ವಚ್ಚಗೊಳಿಸಿದ ಬಳಿಕವೂ ತ್ಯಾಜ್ಯ ಎಸೆಯುತ್ತಿದ್ದ ಲಾರಿಯೊಂದನ್ನು ತಡೆದು ನಿಲ್ಲಿಸಿ, ಉಡುಪಿ ನಗರಸಭೆಯ ತಂಡ ಚಾಲಕನಿಗೆ ದಂಡ ವಿಧಿಸಿಲಾಗಿದೆ.

ಉಡುಪಿ ನಗರಸಭೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ -66 ರಲ್ಲಿ ಕರಾವಳಿ ಜಂಕ್ಷನ್ನಿಂದ ಕುಂದಾಪುರ / ಮಂಗಳೂರು ಹೆದ್ದಾರಿ ಬದಿಯ ಎರಡೂ ಪಾಶ್ವದಲ್ಲಿ ಎಸೆಯಲಾಗಿದ್ದ ಕಸವನ್ನು ಫೆಬ್ರವರಿ 13 ರಂದು ಸಾರ್ವಜನಿಕರು, ಸಂಘ ಸಂಸ್ಥೆಗಳ ಸಹಕಾರದೊಂದಿಗೆ ತೆರವುಗೊಳಿಸಿ ಸ್ವಚ್ಛಗೊಳಿಸಲಾಗಿತ್ತು. ಅದರೂ ನಿರಂತರವಾಗಿ ಸದ್ರಿ ಪ್ರದೇಶಗಳಲ್ಲಿ ಆಗಾಗ್ಗೆ ತಪಾಸಣೆ ನಡೆಸಿ, ಕಸ ಎಸೆಯುವವರಿಗೆ ದಂಡ ವಿಧಿಸಲಾಗಿತ್ತು.
ಈ ಬಳಿಕ ವೂ ಹೆದ್ದಾರಿಯಲ್ಲಿ ಅಲ್ಲಲ್ಲಿ ಕಸ ಎಸೆಯುವ ಪ್ರಕ್ರಿಯೆ ಮುಂದುವರೆದಿದ್ದು, ಇದೇ ಕಾರಣಕ್ಕೆ ಮಾ.3ರ ಬುಧವಾರ ಉಡುಪಿ ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕಿ ಶಶಿರೇಖಾ ಮತ್ತು ಸಿಬ್ಬಂದಿಯವರು ನಿಟ್ಟೂರಿನ ಆಭರಣ ಮೋಟಾರ್ ಸಮೀಪದ ರಾಷ್ಟ್ರೀಯ ಹೆದ್ದಾರಿ ಬಳಿ ಲಾರಿಯಲ್ಲಿ ಬಂದು ತ್ಯಾಜ್ಯ ಎಸೆಯುತ್ತಿರುವವರನ್ನು ಹಿಡಿದು, ಲಾರಿಯನ್ನುತಡೆದು ನಿಲ್ಲಿಸಿ, ಚಾಲಕನಿಗೆ ದಂಡ ವಿಧಿಸಿದರು.
ಈ ಮಾರ್ಗದಲ್ಲಿ ಸಂಚರಿಸುತ್ತಿದ್ದಅಪರಜಿಲ್ಲಾಧಿಕಾರಿ ಸದಾಶಿವ ಪ್ರಭು, ಕಸ ಎಸೆದ ಲಾರಿ ಚಾಲಕನನ್ನು ತರಾಟೆಗೆ ತೆಗೆದುಕೊಂಡು, ಎಚ್ಚರಿಕೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಹಾಗೂ ರಸ್ತೆ ಬದಿಯಲ್ಲಿ ಕಸ - ತ್ಯಾಜ್ಯವನ್ನುಎಸೆಯುವವರ ಮೇಲೆ ಹೆಚ್ಚಿನ ನಿಗಾ ವಹಿಸಿ, ಕಾನೂನು ಕ್ರಮ ತೆಗೆದುಕೊಳ್ಳುವಂತೆ ನಗರಸಭೆಯ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಸೂಚಿಸಿದರು.