ಹಿರಿಯಡ್ಕ, ಮಾ 04 (DaijiworldNews/MS): ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನುಎಗರಿಸಿರುವ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಂಜಲಿಸ ಎಂಬವರು ಮಣಿಪಾಲದಲ್ಲಿ ಎಂಜಲ್ ಡ್ರೈವಿಂಗ್ ಸ್ಕೂಲ್ ನಡೆಸಿಕೊಂಡಿದ್ದು, ಮಾ.2ರಂದು ಸಂಜೆ ಕೆಲಸ ಮುಗಿಸಿ ಮನೆಗೆ ಹೋದಾಗ ಹಿಂಬಾಗಿಲು ಮುರಿದ ಸ್ಥಿತಿಯಲ್ಲಿ ಕಂಡುಬಂದಿತ್ತು.
ಮನೆಯ ಹಿಂದಿನ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಚಿನ್ನದ ಕರಿಮಣಿ ಸರ, 3 ಚಿನ್ನದ ಚೈನ್, ಚಿನ್ನದ ಬಳೆ, ನಾಲ್ಕು ಜೊತೆ ಕಿವಿಯ ಓಲೆ, ಮನೆಯಲ್ಲಿಟ್ಟದ ಆಸ್ತಿ ಪತ್ರ ಹಾಗೂ ಇತರ ದಾಖಲಾತಿಗಳು, ಲ್ಯಾಪ್ ಟ್ಯಾಪ್, ಎರಡು ಜೊತೆ ಬೆಳ್ಳಿಯ ಕಾಲು ಗೆಜ್ಜೆ ಕಳವು ಮಾಡಲಾಗಿದೆ. 172 ಗ್ರಾಂ ತೂಕದ 3,42,000 ರೂ. ಮೌಲ್ಯದ ಚಿನ್ನಾಭರಣ ಹಾಗೂ 9000ರೂ. ಮೌಲ್ಯದ ಬೆಳ್ಳಿಯ ಗೆಜ್ಜೆ ಸೇರಿದಂತೆ ಕಳವಾದ ಸೊತ್ತುಗಳ ಒಟ್ಟು ಮೌಲ್ಯ 3,56,000 ರೂ. ಎಂದು ಅಂದಾಜಿಸಲಾಗಿದೆ.