ಮಂಗಳೂರು, ಮಾ.04 (DaijiworldNews/HR): ಬೆಳ್ತಂಗಡಿ ತಾಲೂಕಿನ ಉಜಿರೆಯ ಯುವತಿಯೊಬ್ಬರು ಕಳೆದ ಒಂಬತ್ತು ದಿನದ ಹಿಂದೆ ನಾಪತ್ತೆಯಾಗಿದ್ದು, ಇದೀಗ ಆಕೆಯ ಮೃತದೇಹ ಕಾಡಿನಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಯುವತಿಯನ್ನು ತೇಜಸ್ವಿನಿ(23) ಎಂದು ಗುರುತಿಸಲಾಗಿದೆ.
ಯುವತಿಯು ಉಜಿರೆಯ ಮನೆಯೊಂದರಲ್ಲಿ ಕೆಲಸ ಮಾಡಿಕೊಂಡು ಕಂಪ್ಯೂಟರ್ ಶಿಕ್ಷಣ ಪಡೆಯುತ್ತಿದ್ದು, ತಾಯಿ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ಆಕೆ ಕಳೆದ ಒಂಬತ್ತು ದಿನದಿಂದ ನಾಪತ್ತೆಯಾಗಿದ್ದಳು.
ಇನ್ನು ಬೆಳ್ತಂಗಡಿಯ ಕೊಲೋಡಿ ಕಾಡಿನಲ್ಲಿ ತೇಜಸ್ವಿನಿಯ ಮೃತದೇಹ ಪತ್ತೆಯಾಗಿದ್ದು, ರಾಸಾಯನಿಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ ಎನ್ನಲಾಗಿದೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.