ಮಂಗಳೂರು, ಜು 25 : ವಾಹವಾಗುವುದಾಗಿ ನಂಬಿಸಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಸುರತ್ಕಲ್ ನಿವಾಸಿಯಾದ ವಕೀಲ ಇಸ್ಮಾಯಿಲ್ ಎಂಬಾತನ ವಿರುದ್ದ ನಗರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರ ಮಹಿಳೆಯೂ 2017 ರಲ್ಲಿ ವಿವಾಹವಾಗಿದ್ದು, ದಾಂಪತ್ಯ ಜೀವನ ಮೂರು ತಿಂಗಳಲ್ಲೇ ಮುರಿದು ಬಿದ್ದಿತ್ತು. ಈ ಬಗ್ಗೆ ಕೋರ್ಟ್ ನಲ್ಲಿ ಡೈವೋರ್ಸ್ ಗಾಗಿ ವಕೀಲ ಇಸ್ಮಾಯಿಲ್ ಮೂಲಕ ದಾವೆ ಹೂಡಿದ್ದರು. ದಾವೆಯ ಬಳಿಕ ಅವರ ಪತಿ ಸಂಪೂರ್ಣ ಪರಿಹಾರ ಮೊತ್ತ ನೀಡಲು ಒಪ್ಪಿ ಮಹಿಳೆಯ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿದ್ದಾರೆ. ಆದರೆ ವಕೀಲ ಮಾತ್ರ ಮಹಿಳೆ ಜತೆ ಸಂಪರ್ಕ ಕಡಿದುಕೊಂಡಿರಲಿಲ್ಲ.ಆಗಾಗ ಫೋನ್ ಕರೆ ಮಾಡುತ್ತಿದ್ದ ವಕೀಲ ಆಕೆಯನ್ನು ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದ.
ಆದರೆ ಕೆಲ ಸಮಯದ ಬಳಿಕ ವಕೀಲ ಬೇರೊಂದು ಯುವತಿ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಈ ವಿಷಯ ನೊಂದ ಮಹಿಳೆಗೆ ತಿಳಿದು ಜು.20 ರಂದು ಪ್ರಶ್ನಿಸಲು ಹೋದಾಗ ವಕೀಲ ಮಹಿಳೆ ಮೇಲೆ ಹಲ್ಲೆ ಮಾಡಿದ್ದ ಎಂದು ನೊಂದ ಮಹಿಳೆ ನಗರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಘಟನೆ ಬಳಿಕ ವಕೀಲ ಇಸ್ಮಾಯಿಲ್ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.