ಮಂಗಳೂರು, ಮಾ. 04 (DaijiworldNews/SM): ಸರಕಾರಿ ಕಚೇರಿಯಲ್ಲಿ ಉದ್ಯೋಗ ತೆಗೆಸಿಕೊಡುವುದಾಗಿ ಹೇಳಿ ನಂಬಿಸಿ ಪ್ರಭಾವಿಗಳ ಹೆಸರುಗಳನ್ನು ಬಳಸಿಕೊಂಡು ಹಲವು ಮಹಿಳೆಯರು ಹಾಗೂ ಯುವಕರಿಂಡ ಹಣ ಪಡೆದುಕೊಂಡು ಯುವಕನೊಬ್ಬ ವಂಚಿಸಿರುವ ಘಟನೆ ನಡೆದಿದ್ದು, ಆತನಿಗೆ ಸಾರ್ವಜನಿಕರೇ ಧರ್ಮದೇಟು ನೀಡಿದ್ದಾರೆ.

ವಂಚಿಸಿದ ಯುವಕ ಶಾಸಕ ಭರ್ತ್ ಶೆಟ್ಟಿ ಸೇರಿದಂತೆ ಹಲವು ಮಂದಿಯ ಹೆಸರುಗಳನ್ನು ಬಳಸಿಕೊಂಡು ಅವರ ಮೂಲಕ ಉದ್ಯೋಗ ತೆಗೆಸಿಕೊಡುವುದಾಗಿ ನಂಬಿಸಿದ್ದ. ಅಲ್ಲದೆ, ಉದ್ಯೋಗಾಕಾಂಕ್ಷಿಗಳಿಂದ ತಲಾ ಐವತ್ತು ಸಾವಿರ ರೂಪಾಯಿಗಳನ್ನು ಪಡೆದುಕೊಂಡು ಬಳಿಕ ವಂಚಿಸಿದ್ದಾನೆ.
ಯುವಕನ ಮೋಸದಾಟ ತಿಳಿಯುತ್ತಿದ್ದಂತೆ ಹಣ ಕಳೆದುಕೊಂಡವರೆಲ್ಲ ಜೊತೆಯಾಗಿ ಯುವಕನನ್ನು ಪ್ರಶ್ನಿಸಿದ್ದಾರೆ. ಹಾಗೂ ಹಣ ಮರಳಿಸುವಂತೆ ಕೇಳಿದ್ದಾರೆ. ಅಲ್ಲದೆ ಸಾರ್ವಜನಿಕವಾಗಿ ಆತನಿಗೆ ಗೂಸಾ ನೀಡಿದ್ದಾರೆ. ಇದನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಟ್ಟಿದ್ದು, ಇದೀಗ ವೈರಲ್ ಆಗುತ್ತಿದೆ.