ಮಲ್ಪೆ, ಜು. 25: ಮೀನುಗಾರಿಕೆ ನಡೆಸಿ ವಾಪಾಸ್ ಆಗಿ , ದೋಣಿಯನ್ನು ತಡಕ್ಕೆ ಎಳೆಯುತ್ತಿದ್ದ ಸಂದರ್ಭ ಬೃಹತ್ ಅಲೆಯೊಂದು ಅಪ್ಪಳಿಸಿ ಓರ್ವ ಮೃತಪಟ್ಟು, ಇನೋರ್ವ ಸಮುದ್ರ ಪಾಲಾಗಿರುವ ಘಟನೆ ಮಲ್ಪೆಯ ಪಡುಕರೆ ತೀರದಲ್ಲಿ ಜು 25 ರ ಬುಧವಾರ ನಡೆದಿದೆ. ಮೃತರನ್ನು ಉದ್ಯಾವರ ಪಿತ್ರೋಡಿಯ ನಿತೇಶ್ (29) ಎಂದು ಗುರುತಿಸಲಾಗಿದೆ. ನಾಪತ್ತೆಯಾದ ನಿಶಾಂತ್ (22) ಗಾಗಿ ತೀವ್ರ ಶೋಧ ಮುಂದುವರಿದಿದೆ.
ನಿಶಾಂತ್
ನಿತೇಶ್
ತನ್ನ ಸಹವರ್ತಿಗಳೊಂದಿಗೆ, ನಿತೇಶ್ ಹಾಗೂ ನಿಶಾಂತ್ ಮೀನುಗಾರಿಕೆ ಮುಗಿಸಿ ದಡಕ್ಕೆ ಬಂದಿದ್ದು, ಸುಮಾರು 200 ಮೀ. ದೂರದಲ್ಲಿದ್ದ ದೋಣಿಯನ್ನು ತಡಕ್ಕೆ ಎಳೆದುತರಲಾಗುತ್ತಿತ್ತು. ಈ ಸಂದರ್ಭ ಬೃಹತ್ ಅಲೆಯೊಂದು ಬಂದು ಅಪ್ಪಳಿಸಿದೆ. ಘಟನೆಯಿಂದ ಇವರಿಬ್ಬರೂ ಸಮುದ್ರ ಪಾಲಾಗಿದ್ದರೂ, ನಿತೇಶ್ ಮೃತದೇಹ ಅಲ್ಲೇ ಸಮೀಪ ಪತ್ತೆಯಾಗಿದ್ದು, ಇನ್ನೋರ್ವ ನೀರಿನಲ್ಲಿ ನಾಪತ್ತೆಯಾಗಿದ್ದಾರೆ. ನಿತೇಶ್ ಶವನನ್ನು ಅಜ್ಜರ ಕಾಡು ಶವಗಾರದಲ್ಲಿ ಇರಿಸಲಾಗಿದೆ.