ಉಡುಪಿ, ಜು 25: ಶಿರೂರು ಮಠದಲ್ಲಿ ನಾಪತ್ತೆಯಾಗಿರುವ ಸಿಸಿ ಕ್ಯಾಮರಾದ ಡಿವಿಆರ್ ಗಾಗಿ ತನಿಖೆ ಮುಂದುವರಿದಿದ್ದು, ಕಳವುಗೈದಿರುವ ಸಿಸಿಟಿವಿ ಡಿವಿಆರ್ ಸ್ವರ್ಣಾ ನದಿಗೆ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸ್ ವಿಚಾರಣೆ ಸಂದರ್ಭ ಡಿವಿಆರ್ ನಾಪತ್ತೆಯಾದ ಕೃತ್ಯದ ಬಗ್ಗೆ ಮಠದ ಅಡುಗೆ ಭಟ್ಟ ಮಾಹಿತಿ ನೀಡಿದ್ದಾರೆ ಎನ್ನಲಾಗಿದ್ದೂ, ಶಿರೂರು ಮೂಲಮಠದ ಸಮೀಪವಿರುವ ಮನೈ ಗ್ರಾಮದಲ್ಲಿರುವ ಸ್ವರ್ಣಾ ನದಿಯಲ್ಲಿ ಡಿವಿಆರ್ ಗಾಗಿ ತೀವ್ರ ಶೋಧ ನಡೆಯುತ್ತಿದೆ. ಸ್ವರ್ಣಾ ನದಿಯಲ್ಲಿ ಐವರು ಮುಳುಗು ತಜ್ಞರು ಸಿಸಿ ಕ್ಯಾಮರಾದ ಡಿವಿಆರ್ ಗಾಗಿ ಶೋಧ ನಡೆಸುತ್ತಿದ್ದಾರೆ.
ಶ್ರೀಗಳ ಸಾವಿನ ಬೆನ್ನಲ್ಲೇ ಮಠದ ಸಿಸಿ ಕ್ಯಾಮರಾದ ಡಿವಿಆರ್ ಕಾಣೆಯಾಗಿತ್ತು. ಶ್ರೀಗಳ ನಿಗೂಢ ಸಾವಿನ ಪ್ರಕರಣದ ತನಿಖೆಯನ್ನು ದಾರಿ ತಪ್ಪಿಸಲು ಡಿವಿಆರ್ ನ್ನು ಸ್ವರ್ಣಾ ನದಿಗೆ ಎಸೆದಿರುವ ಸಾಧ್ಯತೆಗಳಿವೆ.