ಗುಜರಾತ್, ಜು 25: 2015ರಲ್ಲಿ ಪಾಟೀದಾರರ ಮೀಸಲಾತಿ ಹೋರಾಟದ ಹೆಸರಲ್ಲಿ ನಡೆದಿದ್ದ ಗಲಭೆಯ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಹೋರಾಟದ ನೇತೃತ್ವದ ವಹಿಸಿಕೊಂಡಿದ್ದ ಹಾರ್ದಿಕ್ ಪಟೇಲ್ , ಅಪರಾಧಿ ಎಂದು ಕೋರ್ಟ್ ತೀರ್ಪು ನೀಡಿದೆ. ಗುಜರಾತಿನ ವಿಸ್ನಗರ್ ನ್ಯಾಯಾಲಯ ಅವರನ್ನು ದೋಷಿ ಎಂದು ಪರಿಗಣಿಸಿ, ಈ ಶಿಕ್ಷೆ ನೀಡಿದೆ. ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡುವ ಕುರಿತಂತೆ 2015ರಲ್ಲಿ ಗುಜರಾತಿನಾದ್ಯಂತ ಹೋರಾಟ ನಡೆಸಿದ್ದ ಹಾರ್ದಿಕ್ ಪಟೇಲ್ ಪಾಟೀದಾರ್ ಅನಾಮತ್ ಆಂದೋಲನ್ ಸಮಿತಿ(PAAS)ಯ ಸಂಚಾಲಕರೂ ಆಗಿದ್ದರು.
2015ರಲ್ಲಿ ಪಾಟೀದಾರ್ ಮೀಸಲಾತಿ ಹೋರಾಟದ ಸಂದರ್ಭದಲ್ಲಿ ಬಿಜೆಪಿ ಶಾಸಕ ರಿಷಿಕೇಶ್ ಪಟೇಲರ ವಿಸ್ನಾಗರ ಕಚೇರಿ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಲಾಗಿತ್ತು. ಈ ಸಂಬಂಧ ಕೋರ್ಟ್ ನಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಕೋರ್ಟ್ ವಿಚಾರಣೆ ಪೂರ್ಣಗೊಂಡಿದ್ದು, ಜು ೨೫ ರ ಬುಧವಾರ ಕೋರ್ಟ್ ತೀರ್ಪು ಪ್ರಕಟಿಸಿದೆ.
ಹಾರ್ದಿಕ್ ಪಟೇಲ್ ಮಾತ್ರವಲ್ಲದೆ ಮತ್ತು ಆತನ ಸಹಚರರಾದ ಲಾಲ್ಜೀ ಪಟೇಲ್ ಹಾಗು ಅಂಬಾಲಾಲ್ ಪಟೇಲ್ ರನ್ನು ಕೋರ್ಟ್ ತಪ್ಪಿತಸ್ಥರು ಎಂದು ತೀರ್ಪು ನೀಡಿದೆ.
ಹಾರ್ದಿಕ್ ಪಟೇಲ್ ಸಹಿತ ಎಲ್ಲ ಅಪರಾಧಿಗಳಿಗೆ 2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದ್ದು, ಶಿಕ್ಷೆ ಅಲ್ಲದೇ 50,000 ರೂ.ಗಳ ದಂಡವನ್ನೂ ವಿಧಿಸಲಾಗಿದೆ.