ಕುಂದಾಪುರ, ಜು 26: ಮನೆಯಲ್ಲಿ ಇಲ್ಲವೆನ್ನುವುದನ್ನು ಖಚಿತಪಡಿಸಿಕೊಂಡತ ಕಳ್ಳರು ರಾತ್ರಿ ಮನೆ ನುಗ್ಗಿ ದರೋಡೆ ನಡೆಸಿದ ಘಟನೆ ಕಂದಾವರ ಗ್ರಾಮ ವ್ಯಾಪ್ತಿಯ ಮೂಡ್ಲಕಟ್ಟೆ ರೈಲ್ವೇ ನಿಲ್ದಾಣ ಬಳಿಯ ಮನೆಯೊಂದರಲ್ಲಿ ನಡೆದಿದೆ. ವೇದಾವತಿ ಶೇರೆಗಾರ್ ಎಂಬುವರಿಗೆ ಸೇರಿದ ಮನೆಯಲ್ಲಿ ಪ್ರಕರಣ ನಡೆದಿದೆ. ವೇದಾವತಿ ಶೇರೆಗಾರ್ ಅವರ ಮಗ ಬೆಂಗಳೂರಿನಲ್ಲಿದ್ದು, ತಾಯಿಯೂ ಮಗನ ಜೊತೆಗೇ ಇರುತ್ತಿದ್ದರು ಎನ್ನಲಾಗಿದೆ.
.JPG)
.JPG)
.JPG)
.JPG)
ಅಪರೂಪಕ್ಕೆ ಒಮ್ಮೆ ಕಂದಾವರದ ಮನೆಗೆ ಬರುತ್ತಿದ್ದರು ಎನ್ನಲಾಗಿದ್ದು, ಬುಧವಾರ ಬೆಳಿಗ್ಗೆ ಅಂಚೆ ಸಿಬ್ಬಂದಿ ಅಂಚೆ ಪತ್ರ ನೀಡಲು ಬಂದಿದ್ದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಅಂಚೆಯವ ಸಮೀಪದ ಮನೆಯವರಿಗೆ ಸುದ್ಧಿ ಮುಟ್ಟಿಸಿದ್ದು ಕಂಡ್ಲೂರು ಪೊಲೀಸರು ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಂಗಳವಾರ ತಡರಾತ್ರಿ ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿದ್ದು, ಮನೆಯ ಕಪಾಟಿನಲ್ಲಿಡಲಾಗಿದ್ದ 15 ಸಾವಿರ ರೂ ನಗದು ಹಾಗೂ ಅಷ್ಟೇ ಮೌಲ್ಯದ ಬೆಳ್ಳಿಯ ಆಭರಣಗಳನ್ನು ದೋಚಿದ್ದಾರೆ ಎಂದು ತಿಳಿದು ಬಂದಿದೆ. ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.