ಕಾಸರಗೋಡು, ಜು 27: ಇಂದು ಬೆಳಿಗ್ಗೆ ನಿಧನರಾದ ಹಿರಿಯ ರಾಜಕಾರಣಿ, ಮಾಜಿ ಸಚಿವ ಚೆರ್ಕಳಂ ಅಬ್ದುಲ್ಲ ರವರ ಅಂತ್ಯಕ್ರಿಯೆ ಸಂಜೆ ನೆರವೇರಿತು. ಸಂಜೆ ಐದು ಗಂಟೆ ತನಕ ಸ್ವಗ್ರಹದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ಅಂತಿಮ ದರ್ಶನಕ್ಕಿಡಲಾಗಿತ್ತು . ಕೇರಳ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಸೇರಿದಂತೆ ಸಾವಿರಾರು ಮಂದಿ ಅಂತಿಮ ದರ್ಶನ ಪಡೆದರು.
ಬಳಿಕ ಚೆರ್ಕಳದಲ್ಲಿರುವ ಜುಮಾ ಮಸೀದಿಯಲ್ಲಿ ದಫನ ಕಾರ್ಯ ನಡೆಯಿತು. ಸತತ ನಾಲ್ಕು ಬಾರಿ ಮಂಜೇಶ್ವರ ಶಾಸಕರಾಗಿದ್ದ ಚೆರ್ಕಳಂ ಅಬ್ದುಲ್ಲ ೨೦೦೧ ರಲ್ಲಿ ಕೇರಳ ಸ್ಥಳೀಯಾಡಳಿತ ಸಚಿವರಾಗಿದ್ದರು. ರಾಜ್ಯದ ಪ್ರಮುಖ ರಾಜಕೀಯ ನಾಯಕರಾಗಿದ್ದರು. ದೀರ್ಘ ಕಾಲ ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷ ಹಾಗೂ ಪಕ್ಷದ ರಾಜ್ಯ ಕೋಶಾಧಿಕಾರಿಯಾಗಿದ್ದರು. ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಚೆರ್ಕಳ ರವರನ್ನು ಮಂಗಳೂರು ಆಸ್ಪತ್ರೆಯಲ್ಲಿ ಎರಡು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರ ಸಲಹೆಯಂತೆ ನಿನ್ನೆ ರಾತ್ರಿ ಚೆರ್ಕಳದಲ್ಲಿರುವ ಸ್ವಗ್ರಹಕ್ಕೆ ತರಲಾಗಿತ್ತು . ಇಂದು ಬೆಳಿಗ್ಗೆ ಕೊನೆ ಯುಸಿ ರೆಳೆದರು.