ಸುಳ್ಯ, ಜು 27: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮಂಡಿಸಿರುವ ರಾಜ್ಯ ಬಜೆಟ್ನಲ್ಲಿ ಅಲ್ಪಸಂಖ್ಯಾತರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಸುಳ್ಯದಲ್ಲಿ ಎಸ್.ಡಿ.ಪಿ.ಐ. ವತಿಯಿಂದ ಪ್ರತಿಭಟನೆ ನಡೆಸಿತು.
ಬಜೆಟ್ನಲ್ಲಿ ಅಲ್ಪಸಂಖ್ಯಾತ ವರ್ಗಕ್ಕೆ ಯಾವುದೇ ಹೊಸ ಯೋಜನೆಗಳನ್ನು ಮಂಡಿಸಿಲ್ಲ ಮುಸ್ಲಿಂ ಸಮುದಾಯ ತೀರಾ ಹಿಂದುಳಿದಿದ್ದು ಬಡತನ, ನಿರುದ್ಯೋಗ ಅನಕ್ಷರತೆಯಿಂದ ಬಳಲುತ್ತಿದೆ. ರಾಜ್ಯ ಅಭಿವೃದ್ಧಿಯಲ್ಲಿ ಸಾಗಲು ಹಿಂದುಳಿದಿರುವ ಅಲ್ಪಸಂಖ್ಯಾತರನ್ನು ಮುಂದೆ ತರಬೇಕಾಗಿದೆ. ಇದಕ್ಕಾಗಿ ಬಜೆಟ್ನಲ್ಲಿ ವಿಶೇಷ ಅನುದಾನ ನೀಡಬೇಕು. ಸಮ್ಮಿಶ್ರ ಸರಕಾರ ಕೊಟ್ಟ ಮಾತನ್ನು ಪಾಲಿಸಲು ಕೂಡಲೇ ಅಲ್ಪಸಂಖ್ಯಾತರಿಗೆ ಪೂರಕ ಬಜೆಟ್ ಅನುದಾನ ಬಿಡುಗಡೆ ಮಾಡಬೇಕು ಎಂದು ಪ್ರತಿಭಟನೆಯಲ್ಲಿ ಎಸ್.ಡಿ.ಸಿ .ಐ. ಮುಖಂಡರು ಆಗ್ರಹಿಸಿದರು. ನಂತರ ಈ ಕುರಿತ ಮನವಿಯನ್ನು ಸುಳ್ಯ ತಹಶೀಲ್ದಾರ್ ಮುಖಾಂತರ ಸರಕಾರಕ್ಕೆ ಕಳುಹಿಸಲಾಯಿತು. ಪ್ರತಿಭಟನೆಯಲ್ಲಿ ಜಿಲ್ಲಾ ಎಸ್.ಡಿ.ಪಿ.ಐ. ಸದಸ್ಯ ಜಾಬಿರ್ ಅರಿಯಡ್ಕ, ಕೆ.ಎಸ್. ಉಮ್ಮರ್ ಸುಳ್ಯ ವಿಧಾನ ಸಭಾ ಕ್ಷೇತ್ರದ ಎಸ್.ಡಿ.ಪಿ.ಐ. ಅಧ್ಯಕ್ಷ ರಫೀಕ್, ಕಾರ್ಯದರ್ಶಿ ಮುಸ್ತಾಫಾ ಎಂ.ಕೆ. ಹಮೀದ್ ಬಿಳಿಯಾರು, ಪಿ.ಎಫ್.ಐ. ಅಧ್ಯಕ್ಷ ಮುಸ್ತಾಫಾ ಪೈಚಾರು, ನಗರ ಪಂಚಾಯತ್ ಸದಸ್ಯ ಅಬ್ದುಲ್ ಕಲಾಂ ಸೇರಿದಂತೆ ಮುತ್ತಿತರರು ಭಾಗವಹಿಸಿದ್ದರು.