ಉಡುಪಿ, ಜು 29: ಸೌದಿ ಅರೇಬಿಯಾದಲ್ಲಿ ಮೃತರಾದ ಕುತ್ಯಾರಿ ನರ್ಸ್ ಹೆಝಲ್ ಜ್ಯೂಸ್ನಾ ಮ್ಯಾಥಿಯಾಸ್ (28) ಪಾರ್ಥಿವ ಶರೀರವನ್ನು 15 ದಿನಗಳೊಳಗೆ ಭಾರತಕ್ಕೆ ತರುವ ಸಾಧ್ಯತೆ ಇದೆ.ಇದಕ್ಕಾಗಿ ಕೇಂದ್ರ ಸರ್ಕಾರ ರಾಜತಾಂತ್ರಿಕ ಯತ್ನ ಆರಂಭಿಸಿದೆ ಇತ್ತ ರಾಜ್ಯ ಎನ್ ಆರ್ ಐ ಫೋರಂ ಕೂಡಾ ತನ್ನದೇ ಯತ್ನಗಳನ್ನು ಆರಂಭಿಸಿದೆ.
ಹೆಝಲ್ ಕುಟುಂಬಿಕರು ಇಗಾಗಲೇ ಬಿಜೆಪಿಯ ನವೀನ್ ಶೆಟ್ಟಿಯವರ ಮೂಲಾ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅವರನ್ನು ಭೇಟಿ ಮಾಡಿ ಮಾಹಿತಿ ನೀಡಿದ್ದಾರೆ. ಉಡುಪಿ ಸಂಸದರ ಕಚೇರಿಯಿಂದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೂ ಮಾಹಿತಿ ರವಾನಿಸಲಾಗಿದೆ. ಸೌದಿಯಲ್ಲಿ ವಾರಾಂತ್ಯ ರಜೆ ಇರುವುದರಿಂದ ಪ್ರತಿಕ್ರಿಯೆ ಬರಬೇಕಿದೆ.
ವಿದೇಶಿ ನೆಲದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪುತ್ತಿರುವ ಪ್ರಕರಣಗಳನ್ನು, ಆತ್ಮಹತ್ಯೆಯ ತಲೆಬರಹ ನೀಡಿ ಮುಚ್ಚಿಹಾಕುತ್ತಿರುವ ಬಗ್ಗೆ ಸ್ಥಳೀಯರಲ್ಲಿ ಆತಂಕ ವ್ಯಕ್ತವಾಗಿದೆ. ವಿದೇಶಿ ಸರಕಾರಗಳು ತಮ್ಮ ಘನತೆಗೆ ಕುಂದಾಗುವುದನ್ನ ತಪ್ಪಿಸಲು ಪ್ರಕರಣ ತಿರುಚುವ ಸಾಧ್ಯತೆ ಬಗ್ಗೆ ಕೇಳಿಬರುತ್ತಿದೆ. ಈ ಸರಕಾರ ನೀಡಿದ ತನಿಖಾ ವರದಿ ಒಪ್ಪಿಕೊಳ್ಳಲೇ ಬೇಕಾದ ಅನಿವಾರ್ಯವೂ ಇದೆ. ಈ ಹಿಂದೆ ಲಂಡನ್ ನಲ್ಲಿ ನಡೆದ ನರ್ಸ್ ಜೆಸಿಂತಾ ಸಾವು ಕೂಡಾ ನಿಗೂಢವಾಗಿತ್ತು.