ಸುಳ್ಯ, ಜು 29: ಎಲ್ಲಾ ಹಂತಗಳಲ್ಲೂ ವಿಫಲವಾಗಿರುವ ಮೋದಿ ನೇತೃತ್ವದ ಕೇಂದ್ರ ಸರಕಾರವು ದೇಶವನ್ನು ಅರಾಜಕತೆಗೆ ಕೊಂಡೊಯ್ಯುತ್ತಿದೆ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ಆರೋಪಿಸಿದ್ದಾರೆ.
ಸುಳ್ಯದಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಂಪು ಥಳಿತ ಪ್ರಕರಣದಲ್ಲಿ ಸುಪ್ರಿಂಕೋರ್ಟೇ ಕೇಂದ್ರ ಸರಕಾರಕ್ಕೆ ಆದೇಶ ನೀಡಿದೆ. ದೇಶದಲ್ಲಿ ಅಲ್ಲಲ್ಲಿ ಹಲ್ಲೆ ಪ್ರಕರಣಗಳು ನಡೆಯುತ್ತಿದೆ. ಅವರ ಮತದಾರರೇ ಸರಕಾರದ ಕುರಿತು ಭ್ರಮನಿರಸನಗೊಂಡಿದ್ದಾರೆ. ಪಾಕಿಸ್ತಾನದ ವಿಷಯದಲ್ಲಿ ಮೋದಿಯವರ ಧೋರಣೆಯೇ ಬದಲಾಗಿ ನವಾಝ್ ಶರೀಫ್ ಅವರೊಂದಿಗೆ ಭಾಯೀ ಭಾಯೀ ಎಂದಿದ್ದಾರೆ. ಕಾಶ್ಮೀರದ ಸ್ಥಾನಮಾನದ ಕುರಿತೂ ಬಿಜೆಪಿ ಕೊಟ್ಟ ಭರವಸೆ ಈಡೇರಿಸಿಲ್ಲ. ಪಿ.ಡಿ.ಪಿ.ಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಅಧಿಕಾರದಾಹಿ ಎಂದು ತೋರಿಸಿಕೊಟ್ಟಿದೆ. ರಾಮ ಮಂದಿರ ಕಟ್ಟುತ್ತೇವೆಂದು ಎಂದೋ ಹೇಳಿದ್ದರೂ ಇಂದು ಆಗಿಲ್ಲ. ಮಹಿಳಾ ಮೀಸಲಾತಿ ವಿಧೇಯಕವನ್ನು ಸಂಸತ್ತಿನಲ್ಲಿ ಪಾಸ್ ಮಾಡಲು ನಿರಂತರ ಅಡ್ಡಿ ಮಾಡಿದೆ. ಹೀಗೇ ಬಿಜೆಪಿಯು ಜನಪರ ಸರಕಾರ ನೀಡಲು ವಿಫಲವಾಗಿದೆ ಎಂದು ಆರೋಪಿಸಿದರು.
ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದ ಬಜೆಟ್ ಜನಪರವಾಗಿತ್ತು. ಎಲ್ಲಾ ರೈತರಿಗೂ ಸಾಲಮನ್ನಾ ಸದುಪಯೋಗವಾಗುವಂತೆ ಮಾಡಿದ್ದಾರೆ. ಸರಕಾರಿ ಶಾಲೆಗಳಿಗೆ ಹೋಗುವ ಮಕ್ಕಳಿಗೆ ಮಾತ್ರ ಬಸ್ಪಾಸ್ ಎನ್ನುವುದು ಕೂಡ ಒಳ್ಳೆಯ ನಿರ್ಧಾರ ಎಂದು ಜಯಪ್ರಕಾಶ್ ರೈ ಹೇಳಿದರು.
೧೧೦ ಕೆವಿ ಸಬ್ಸ್ಟೇಷನ್ ಕುರಿತು ಚುನಾವಣೆಯ ಸಂದರ್ಭದಲ್ಲಿ ಜನಾಭಿಪ್ರಾಯ ಕ್ರೋಢೀಕರಿಸಿದ್ದು ನಾವು. ಆ ಬಳಿಕವೇ ಶಾಸಕ ಅಂಗಾರರು ಕನಿಷ್ಠ ಪತ್ರಿಕಾ ಹೇಳಿಕೆ ನೀಡುವಷ್ಟಾದರೂ ಜಾಗೃತರಾದರು. ಗೆದ್ದ ಮೇಲೆ ಕಾಮಗಾರಿ ಅನುಷ್ಠಾನ ಮಾಡುವುದಾಗಿ ಹೇಳಿದ್ದಾರೆ. ಆ ಕಾರ್ಯವನ್ನು ಶೀಘ್ರದಲ್ಲಿ ಮಾಡಬೇಕು ಎಂದು ಅವರು ಒತ್ತಾಯಿಸಿದರು. ಅಜ್ಜಾವರ ರಸ್ತೆಗೆ ಇರುವ ಸಿ.ಆರ್.ಎಫ್. ಫಂಡ್ನ ವಿಚಾರದಲ್ಲೂ ಪ್ರಯತ್ನಿಸಬೇಕಾದವರು ಶಾಸಕರೇ. ಅದನ್ನು ಬಿಟ್ಟು ವಿಧಾಸೌಧದ ಮುಂದೆ ಪತ್ರಿಭಟಿಸಿ ಪ್ರಯೋಜನವಿಲ್ಲ ಎಂದು ಜಯಪ್ರಕಾಶ್ ರೈ ಹೇಳಿದರು.
ಸುಳ್ಯ ನಗರ ಪಂಚಾಯತ್ ಆಡಳಿತವು ಕೆಟ್ಟು ಹೋಗಿದೆ. ಎಷ್ಟೋ ವರ್ಷಗಳ ನಂತರ ಅಂಗಾರರು ಕಲ್ಚರ್ಪೆಗೆ ಭೇಟಿ ನೀಡಿದ್ದಾರೆ. ಅಧಿಕಾರಿಗಳ ಸಭೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡುತ್ತಿದ್ದಾರೆ. ಅಲ್ಲೊಂದು ಆಡಳಿತ ಮಂಡಳಿ ಇದೆ. ಶಾಸಕರು ಅವರನ್ನೂ ಎಚ್ಚರಿಸುವ ಕೆಲಸ ಮಾಡಬೇಕು. ಆಡಳಿತ ಮಂಡಳಿಯವರು ಹೋರಾಟ ಮಾಡುವುದು ಮುಖ್ಯಾಧಿಕಾರಿಯ ಕುರ್ಚಿಗೋಸ್ಕರ ಮಾತ್ರ ಎಂದು ಜಯಪ್ರಕಾಶ್ ರೈ ಹೇಳಿದರು.
ಕೆಪಿಸಿಸಿ ಕಾರ್ಯದರ್ಶಿ ವೆಂಕಪ್ಪ ಗೌಡ, ಕಾಂಗ್ರೆಸ್ ನಾಯಕರುಗಳಾದ ಚಂದ್ರಶೇಖರ ಕಾಮತ್, ಪಿ.ಸಿ.ಜಯರಾಮ್, ಸಿದ್ದಿಕ್ ಕೊಕ್ಕೋ, ಶ್ರೀಹರಿ ಕುಕ್ಕುಡೇಲು, ಕೆ.ಗೋಕುಲ್ದಾಸ್, ದಿನೇಶ್ ಅಂಬೆಕಲ್ಲು, ನೆಕ್ರೆಪ್ಪಾಡಿ ಕೃಷ್ಣಪ್ಪ ಗೌಡ, ಆರ್.ಕೆ.ಮಹಮ್ಮದ್, ರಾಜಾರಾಮ್ ಬೆಟ್ಟ, ನಂದರಾಜ್ ಸಂಕೇಶ್, ದೇವಪ್ಪ ನಾಯ್ಕ್, ಮುತ್ತಪ್ಪ ಪೂಜಾರಿ, ಜಿ,ಕೆ.ಹಮೀದ್, ಬೀರಾಮೊಯಿದ್ದೀನ್, ಪ್ರಸಾದ್ ರೈ ಮೇನಾಲ, ಸೋಮಶೇಖರ ಕೊಯಿಂಗಾಜೆ, ಬಿ.ಎಸ್.ಯಮುನಾ, ಎನ್.ಜಿ.ಲೋಕನಾಥ ರೈ, ಪರಮೇಶ್ವರ ಕೆಂಬಾರೆ, ಸತ್ಯಕುಮಾರ್ ಆಡಿಂಜ, ಅಶೋಕ್ ಚೂಂತಾರು, ಮಿಥುನ್ ಕರ್ಲಪ್ಪಾಡಿ, ಜಯಪ್ರಕಾಶ್ ನೆಕ್ರೆಪ್ಪಾಡಿ, ಕಾಂತಿ ಮೋಹನ್, ಅಶೋಕ್ ಚೂಂತಾರು, ಭವಾನಿಶಂಕರ ಕಲ್ಮಡ್ಕ, ಶರೀಫ್ ಕಂಠಿ, ಶಾಪಿ ಕುತ್ತಮೊಟ್ಟೆ, ಶಶಿಕಲಾ ದೇರಪ್ಪಜ್ಜನಮನೆ, ರಾಧಾಕೃಷ್ಣ ಪರಿವಾರಕಾನ, ಇಸ್ಮಾಯಿಲ್ ಪಡ್ಪಿನಂಗಡಿ, ಪ್ರಸಾದ್ ಶೆಣೈ, ಮೂಸಾಕುಂಞಿ ಪೈಂಬೆಚ್ಚಾಲ್, ಪ್ರವೀಣಾ ರೈ ಮರುವಂಜ, ಸುಜಯ ಕೃಷ್ಣ, ಶ್ರೀಲತಾ ಪ್ರಸನ್ನ, ಮಾಧವ ಎರ್ದಡ್ಕ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.