ಕುಂದಾಪುರ, ಜು 30: ಆಹಾರ- ವಿಹಾರ, ಆಚಾರ- ವಿಚಾರ ಮನುಷ್ಯನ ಬದುಕಿನ ಪ್ರಮುಖ 4 ಚಕ್ರಗಳಾಗಿದ್ದು, ಅವುಗಳು ಒಳ್ಳೆಯ ರೀತಿಯಲ್ಲಿದ್ದಾಗ ಮಾತ್ರ ಬದುಕಿನ ಬಂಡಿ ಉತ್ತಮವಾಗಿ ಸಾಗಲು ಸಾಧ್ಯ. ವಿಜ್ಞಾನದ ಹೆಸರಲ್ಲಿ ಬೇಡದ ಆಹಾರವನ್ನೆಲ್ಲ ತಿಂದು ಅಜ್ಞಾನಿಗಳಾಗುತ್ತಿದ್ದೇವೆ ಎಂದು ಉಡುಪಿ ಕುತ್ಪಾಡಿ ಆಯುರ್ವೇದ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ| ರವಿಕೃಷ್ಣ ಎಸ್. ಹೇಳಿದರು.
ಅವರು ರವಿವಾರ ಬಾಂಡ್ಯಾ ಎಜುಕೇಶನಲ್ ಟ್ರಸ್ಟ್ನಗುರುಕುಲ ವಿದ್ಯಾ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ವಕ್ವಾಡಿ ಗುರುಕುಲದಲ್ಲಿ ಆಯೋಜಿಸಿದ ಸಾಂಪ್ರದಾಯಿಕ ಸಸ್ಯ ಪದಾರ್ಥಗಳ ಪರಿಚಯ ‘ಸಸ್ಯಾಮೃತ’ ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.
ಭೂಮಿಯಲ್ಲಿರುವ ಎಲ್ಲ ಜೀವಿಗಳಿಗಿಂತ ಮನುಷ್ಯ ಮಾತ್ರ ಪರಿಸರವನ್ನು ಅಭಿವೃದ್ಧಿ ಹೆಸರಲ್ಲಿ ಹಾಳು ಮಾಡುತ್ತಿದ್ದಾನೆ. ಎಲ್ಲ ರೋಗಗಳಿಗೂ ನಮ್ಮಲ್ಲೇ ಔಷಧಗಳಿದ್ದರೂ, ಇಂಗ್ಲಿಷ್ ಔಷಧಿಯ ಪ್ರಭಾವಕ್ಕೆ ಮಾರು ಹೋಗುತ್ತಿದ್ದೇವೆ. ಸಮತೋಲನ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ ಹೊಂದಲು ಸಾಧ್ಯ. ಅದರಂತೆ ಉತ್ತಮ ಆರೋಗ್ಯಕ್ಕೆ ಸಹಕಾರಿಯಾದ ಸಸ್ಯಗಳ ಬಗ್ಗೆ ನಿರಂತರ ಚಿಂತನೆಯಾಗಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಗುರುಕುಲ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಬಿ. ಅಪ್ಪಣ್ಣ ಹೆಗ್ಡೆ ಮಾತನಾಡಿ, ಭಾರತೀಯ ಸಂಪ್ರದಾಯದಂತೆ ಆಯಾಯ ಋತುವಿಗೆ ಅನುಗುಣವಾಗಿ ಆಹಾರ ಪದ್ದತಿಯನ್ನು ಅನುಸರಿಸಿಕೊಂಡರೆ ಉತ್ತಮ ಆರೋಗ್ಯ ಕಾಪಾಡಲು ಬೇರೇನೂ ಬೇಡ. ಆದರೆ ಪಾಶ್ಚಿಮಾತ್ಯ ಆಹಾರದಿಂದ ಅನಾಹುತವನ್ನು ನಾವು ತಂದುಕೊಂಡಿದ್ದೇವೆ ಎಂದರು.
ಹಿತ- ಮಿತ ಆಹಾರ ಅಗತ್ಯ
ಪಾರಂಪರಿಕ ಸಸ್ಯ ಸಂಸ್ಕೃತಿ ದಿನೇ ದಿನೇ ಕ್ಷೀಣಿಸುತ್ತಿದೆ. ಹೆಚ್ಚಿನವರಿಗೆ ಅದರ ಬಗ್ಗೆ ಅರಿವು ಕೂಡ ಇಲ್ಲ. ಹಿತ- ಮಿತವಾದ ಆಹಾರ ಪದ್ದತಿಯನ್ನು ಅನುಸರಿಸಬೇಕಾದುದು ಇಂದಿನ ತುರ್ತು ಅಗತ್ಯ. ಆ ನಿಟ್ಟಿನಲ್ಲಿ ಕಳೆದ ೬ ವರ್ಷಗಳಿಂದ ಈ ಸಸ್ಯಾಮೃತ ಕಾರ್ಯಕ್ರಮವನ್ನು ಆಯೋಜಿಸಿ ಆ ಮೂಲಕ ಸಾಂಪ್ರದಾಯಿಕ ಸಸ್ಯ ಪದಾರ್ಥಗಳ ಪರಿಚಯ ಮಾಡಿಕೊಡುವ ಉದ್ದೇಶ ಎಂದು ಬಾಂಡ್ಯ ಶಿಕ್ಷಣ ಸಂಸ್ಥೆಗಳ ಜಂಟಿ ಕಾರ್ಯನಿರ್ವಾಹಕಿ ಅನುಪಮಾ ಎಸ್. ಶೆಟ್ಟಿ ಹೇಳಿದ