ಬೆಳ್ತಂಗಡಿ, ಜು 31: ಉಜಿರೆಯಲ್ಲಿ ಕೆಲಸ ಮುಗಿಸಿ ಸಹೋದರಿಯರಿಬ್ಬರು ತೆರಳುತ್ತಿದ್ದ ಆಟೋಗೆ ಪಿಕಪ್ ವಾಹನ ಡಿಕ್ಕಿ ಹೊಡೆಸಿ ಯುವತಿಯವರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಅಮಾನವೀಯ ಘಟನೆ ಬೆಳ್ತಂಗಡಿ ತಾಲೂಕಿನ ಗಂಡಿಬಾಗಿಲು ಆಶ್ರಮ ಬಳಿ ನಡೆದಿದೆ. ಇಲ್ಲಿನ ಗಂಡಿಬಾಗಿಲು ನಿವಾಸಿ ಬಿ.ಜೆ. ಥಾಮಸ್ ಪ್ರಕರಣದ ಆರೋಪಿ.
ಈತ ಪಿಕಪ್ ಡಿಕ್ಕಿ ಹೊಡೆಸಿದ ರಭಸಕ್ಕೆ ರಿಕ್ಷಾ ಪಲ್ಟಿಯಾಗಿದೆ. ಪರಿಣಾಮ ಇಬ್ಬರು ರಿಕ್ಷಾದಿಂದ ಹೊರಬಿದ್ದಿದ್ದಾರೆ. ಈ ವೇಳೆ ಆರೋಪಿ ಅಕ್ಕ- ತಂಗಿಯರಿಬ್ಬರನ್ನು ಆಚೆ ಎಳೆದು ಕಚ್ಚಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂಬುದಾಗಿ ಯುವತಿಯರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.. ಇನ್ನು ಈ ವೇಳೆ ಯುವತಿಯರ ರಕ್ಷಣೆಗೆ ಮುಂದಾದ ಆಟೋ ಚಾಲಕನ ಮೇಲೂ ಆರೋಪಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾನೆ. ಇನ್ನು ಕೆಲಸ ಮುಗಿಸಿ ಆಟೋದಲ್ಲಿ ಯುವತಿಯರು ಮನಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ. ಆರೋಪಿಯ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಕ್ಷಣವೇ ಆತನನ್ನು ಬಂಧಿಸಲಾಗಿದೆ.