ಮಂಗಳೂರು, ಮಾ.05 (DaijiworldNews/HR): ಮೇಕಪ್ ಫೌಂಡೇಶನ್ ಪೆಟ್ಟಿಯ ಕೆಳಭಾಗದಲ್ಲಿ ಚಿನ್ನವನ್ನು ಅಂಟಿಸಿ ಅಕ್ರಮವಾಗಿ ಸಾಗಿಸುತ್ತಿದ್ದ ಇಬ್ಬರನ್ನು ಮಂಗಳೂರು ವಿಮಾನ ನಿಲ್ದಾಣದಿಂದ ವಶಕ್ಕೆ ಪಡೆಯಲಾಗಿದೆ.


ಒಟ್ಟು 11,00,946 ಲಕ್ಷ ಮೌಲ್ಯದ 238 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಗುಜರಾತಿನ ಕಾಸಿಂ ಇಬ್ರಾಹಿಂ ಕೋಲಾಡ್ ಮತ್ತು ಭಟ್ಕಳ ಮೂಲದ ಮೊಹಮ್ಮದ್ ಬಶರ್ ರುಕ್ನುದ್ದೀನ್ ಇಬ್ಬರೂ ದುಬೈನಿಂದ ಇಂಡಿಗೊ ವಿಮಾನದ ಮೂಲಕ ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.
ತಂಡದ ನೇತೃತ್ವವನ್ನು ಡಾ.ಕಪಿಲ್ ಗಡೆ ಐಆರ್ಎಸ್ ಉಪ ಆಯುಕ್ತರು, ಬಿಕ್ರಮ್ ಅಧೀಕ್ಷಕರು, ಚಂದ್ರ ಮೋಹನ್ ಮತ್ತು ಇನ್ಸ್ಪೆಕ್ಟರ್ ಸಂದೀಪ್ ವಹಿಸಿದ್ದರು.