ಮಂಗಳೂರು, ಮಾ 05 (DaijiworldNews/MS): ಗ್ರಾಹಕನ ಸೋಗಿನಲ್ಲಿ ಬಂದು ಹಾಡುಹಗಲೇ ಚಿನ್ನ ಕದ್ದು ಪರಾರಿಯಾಗುತ್ತಿದ್ದ ಕಳ್ಳನನ್ನು ಸಿನೀಮಿಯ ಶೈಲಿಯಲ್ಲಿ ಚಿನ್ನದಂಗಡಿಯ ಮಾಲೀಕ ಬೆನ್ನಟ್ಟಿ ಹಿಡಿದ ಘಟನೆ ಮಾರ್ಚ್ 4 ರ ಗುರುವಾರ ನಡೆದಿದೆ.


ಕಾರ್ ಸ್ಟ್ರೀಟ್ನಲ್ಲಿರುವ ಅರುಣ್ ಜಿ ಶೆಟ್ ಜ್ಯುವೆಲ್ಲರ್ಸ್ಗೆ ಗುರುವಾರ ಮಧ್ಯಾಹ್ನದ ವೇಳೆಗೆ ಗ್ರಾಹಕ ಸೋಗಿನಲ್ಲಿ ಬಂದ ವ್ಯಕ್ತಿಯೋರ್ವ ಉಂಗುರ ತೋರಿಸುವಂತೆ ಹೇಳಿ ಬಳಿಕ ಚಿನ್ನದ ಅಭರಣ ಕಳ್ಳತನ ಮಾಡಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಆಭರಣದೊಂದಿಗೆ ಪಲಾಯನ ಮಾಡುವುದನ್ನು ನೋಡಿದ ಅಂಗಡಿ ಮಾಲೀಕ ಕಳ್ಳನನ್ನು ಬೆನ್ನಟ್ಟಿ ಅಣತಿ ದೂರದಲ್ಲಿ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಘಟನೆ ಕುರಿತು ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳತನ ಈ ಎಲ್ಲಾ ದೃಶ್ಯಾವಳಿ ಸಿಸಿಟಿವಿಯಲ್ಲಿ ದಾಖಲಾಗಿದೆ.